ರಾಣೆಬೆನ್ನೂರ

ಜ್ಞಾನ ವಿಕಾಸ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ

ಜ್ಞಾನ ವಿಕಾಸ ಅಕಾಡೆಮಿಯಿಂದ ಉಚಿತ ಕಾರ್ಯಾಗಾರ

ರಾಣೀಬೆನ್ನೂರ 02: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಸಾಧನೆ ಮತ್ತು ಸಾಮರ್ಥ್ಯ ಮೆರೆಯುವಲ್ಲಿ ಹಿಂದುಳಿಯುತ್ತಿದ್ದಾರೆ ಇದರಿಂದಾಗಿ ಅವರಲ್ಲಿ ಸಾಕಷ್ಟು ಶೈಕ್ಷಣಿಕ ಪ್ರತಿಭೆ ಮತ್ತು ಜ್ಞಾನ ಸಂಪತ್ತು ಇದ್ದರೂ ಸಹ ಕೆ.ಎ.ಎಸ್, ಪಿಎಸ್‍ಐ, ಪಿಡಿಓ, ಎಫ್‍ಡಿಎ, ಎಸ್‍ಡಿಎ, ಪಿಸಿ, ಆರ್‍ಆರ್‍ಬಿ ಮತ್ತು ಟೀಚರ್ ಹುದ್ದೆಗಳಲ್ಲಿ ನಮ್ಮ ಪ್ರತಿಭೆಗಳ ಕೊರತೆ ಕಂಡು ಬರುತ್ತಿದ್ದು ಇದನ್ನು ಗಮನಿಸಿ ನಮ್ಮ ಜ್ಞಾನ ವಿಕಾಸ, ಕರಿಯರ್ ಅಕಾಡೆಮಿಯು ನಗರದಲ್ಲಿ ಎರಡು ದಿನ ಉಚಿತ ತರಬೇತಿ ಕಾಯಾಗಾರವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಅದ್ಯಕ್ಷ ಶ್ರೀನಿವಾಸ ನೆಲವಾಗಲ ಹೇಳಿದರು.

ಅವರು ಗುರುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಭವಿಷ್ಯದಲ್ಲಿ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಧಾರವಾಡ, ವಿಜಯಪುರ ಮತ್ತಿತರೆ ಕಡೆಗಳ ವಿಷಯ ಪರಿಣಿತರಿಂದ ಮಾದರಿ ಪರೀಕ್ಷೆಗಳನ್ನು ಆಯೋಜಿಸಲಾಗುವುದು ಆಸಕ್ತರು ಕಾರ್ಯಾಗಾರದ ಪ್ರಯೋಜನ ಪಡೆಯಬೇಕು. ಸಪ್ಟಂಬರ್ 4 ಮತ್ತು 5 ರಂದು ಚೌಡೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಾರ್ಯಾಗಾರ ನಡೆಯಲಿದ್ದು ಹೆಸರು ನೊಂದಾಯಿಸಬಹುದಾಗಿದೆ. 9482708594 ಹಾಗೂ ಪ್ರವೀಣ್ ದೊಡ್ಡಮನಿ 9964021533.

ಸುದ್ದಿ ಓದಿ