ಪಟ್ಟಣದ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ
ಶಿಗ್ಗಾವಿ 24: ಭಾರತ ಸೇವಾ ಸಂಸ್ಥೆ(ರಿ) ಬನ್ನೂರ ನೇತೃತ್ವದಲ್ಲಿ ಪಟ್ಟಣದ ತಾಲೂಕಾ ಕ್ರೀಡಾಂಗಣ ಶಿಗ್ಗಾಂವದಲ್ಲಿ ನಗರದ ವಿದ್ಯಾರ್ಥಿಗಳಿಗೆ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರ ಪ್ರಾಯೋಜಿತ ಉಚಿತ ಬೇಸಿಗೆ ಶಿಬಿರದಲ್ಲಿ ನಾಟಕ ತರಬೇತಿ, ಸಂಗೀತ ತರಬೇತಿ, ನೃತ್ಯ ತರಬೇತಿ, ಥ್ರೋಬಾಲ್, ವಾಲೀಬಾಲ್, ಖೋ-ಖೋ, ಕಬ್ಬಡ್ಡಿ, ಕೇರಂ, ಚೆಸ್, ಬ್ಯಾಟಂಮಿಟನ್, ಟೇಬಲ್ ಟೇನಿಸ್, ಕ್ರಿಕೇಟ ಸಂಬಂಧಪಟ್ಟಂತೆ ದಿ : 10-4-24 ರಿಂದ 30-4-24 ರವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಉಚಿತ ತರಬೇತಿ ಇರುತ್ತದೆ ಕಾರಣ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-3-2024 ರವರೆಗೆ ಅರ್ಜಿ ದೊರೆಯುವ ಸ್ಥಳ : ಶ್ರೀಕಾಂತ ದುಂಡಿಗೌಡ್ರ ಕಾರ್ಯಾಲಯ ಭೀಮಾ ಲೇಹೌಟ್ ಶ್ರೀ ಸಾಯಿ ಮಕ್ಕಳ ಆಸ್ಪತ್ರೆ ಹತ್ತಿರ ಶಿಗ್ಗಾವಿ. ಹೆಚ್ಚಿನ ಮಾಹಿತಿಗಾಗಿ ಪ್ರತೀಕ ಕೊಳೇಕರ 9535335143, ವಿಶ್ವನಾಥ ಗಾಣಿಗೇರ 9844321143, ಚೇತನ ಕಲಾಲ 8105985143 ಸಂಪರ್ಕಿಸಲು ಕೋರಲಾಗಿದೆ.
ನಿಯಮಗಳು : ಶಿಬಿರಾರ್ಥಿಗಳನ್ನು ಆಯ್ಕೆ ಸಮಿತಿ ಮೂಲಕ 30 ಹುಡುಗರು, 20 ಹುಡುಗಿಯರನ್ನು ಆಯ್ಕೆ ಮಾಡಲಾಗುವುದು, ಆಯ್ಕೆ ಪ್ರಕ್ರಿಯೇ ದಿ : 7-4-24 ರವಿವಾರದಂದು ಬೆಳಿಗ್ಗೆ 8 ಗಂಟೆಗೆ ತಾಲೂಕ ಕ್ರೀಡಾಂಗಣದಲ್ಲಿ, ಶಿಗ್ಗಾವಿ ಪಟ್ಟಣದಲ್ಲಿ ವಾಸವಾಗಿರಬೇಕು, 24-25 ನೇ ಸಾಲಿಗೆ 5 ರಿಂದ 9 ನೇ ತರಗತಿ ವ್ಯಾಸಾಂಗ ಮಾಡುತ್ತಿರಬೇಕು, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಅಧಿಕೃತ ಆರೋಗ್ಯ ದೃಡತೆ ಪತ್ರ ತರತಕ್ಕದ್ದು, ಉಚಿತವಾಗಿ ಸಮವಸ್ತ್ರ ನೀಡಲಾಗುವುದು, ಶಿಬಿರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಬಿರ ಮುಗಿಯವವರೆಗೂ ಇರಬೇಕು, ಪ್ರತಿನಿತ್ಯ ಶಿಬಿರಕ್ಕೆ ಪಾಲಕರು ಕರೆದುಕೊಂಡು ಬಂದು ಮುಗಿದ ನಂತರ ಪಾಲಕರು ಕರೆದುಕೊಂಡು ಹೋಗಬೇಕು, ಶಿಬಿರ ಸಂಪೂರ್ಣ ಉಚಿತವಾಗಿದೆ, ಶಿಬಿರದಲ್ಲಿ ಆಸಕ್ತಿಕರ ಕ್ಷೇತ್ರದಲ್ಲಿ ಹೆಚ್ಚಿನ ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರದರ್ಶನಕ್ಕೆ ಕಳುಹಿಸಲಾಗುವುದು.