ಮಂಜುನಾಥ ಗೌಡಶಿವಣ್ಣನವರ ಪರಿವಾರದಿಂದ ಉಚಿತ ಸಾಮೂಹಿಕ ವಿವಾಹ
ರಾಣೇಬೆನ್ನೂರ 03: ತಾಲೂಕಿನ ಬಡವರ್ಗದ ಜನರಿಗೆ ಅನುಕೂಲವಾಗಲೆಂಬ ಸದುದ್ದೇಶದಿದಂದ ಹಾಗೂ ತಂದೆ ಶಂಕ್ರ್ಪ ಮತ್ತು ತಾಯಿ ನೀಲಮ್ಮ ಅವರ ಸ್ಮರಣಾರ್ಥವಾಗಿ 101 ಜೊತೆ ಸರ್ವ ಧರ್ಮಗಳ ಸಾಮೂಹಿಕ ವಿವಾಹವನ್ನು 2022 ನೇ ಮಾರ್ಚ್ ತಿಂಗಳಿನಲ್ಲಿ ನನ್ನ ಸ್ವಂತ ಖರ್ಚಿನಲ್ಲಿ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಏರಿ್ಡಸಲಾಗುವುದು ಎಂದು ನಗರಸಭಾ ಮಾಜಿ ಸದಸ್ಯ ಮಂಜುನಾಥ ಶಂಕ್ರ್ಪ ಗೌಡಶಿವಣ್ಣನವರ ಹೇಳಿದರು.
ಅವರು ನಗರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು, ಈ ಹಿಂದೆ 2009ರಲ್ಲಿ ನನ್ನ ವಿವಾಹ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಸಾಮೂಹಿಕ ವಿವಾಹಗಳನ್ನು ಮಾಡಿದ್ದೇನೆ. ತದನಂತರ ಇದೀಗ ಮತ್ತೆ ಇಂತಹ ಕಾರ್ಯವನ್ನು ಮಾಡಲು ಮುಂದಾಗಿರುವೆ. ಇದಕ್ಕೆ ತಾಲೂಕ ಮತ್ತು ನಗರದ ನಾಗರೀಕರ ಸಹಾಯ ಸಹಕಾರ ಬೇಕಾಗಿದೆ ಎಂದರು.
ವರನಿಗೆ ಧೋತ್ರ, ಶರ್ಟ್ ಬಟ್ಟೆ, ಟವೆಲ್, ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗುರ, ಸೀರೆ, ಬ್ಲೌಸ್ಪೀಸ್ ಉಚಿತವಾಗಿ ನೀಡಲಾಗುವುದು. ವಧು ಅಥವಾ ವರ ಇಬ್ಬರಲ್ಲಿ ಒಬ್ಬರಾದರೂ ಸಹ ರಾಣೇಬೆನ್ನೂರ ತಾಲೂಕಿನವರಾಗಿರಬೇಕು. ಮದುವೆ ಯಾಗಲಿಚ್ಛಿಸುವವರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದರು.
ಹೆಚ್ಚಿನ ಮಾಹಿತಿಗಾಗಿ ಮೋ; 9844490443 ಗೆ ಸಂಪರ್ಕಿಸಬಹುದೆಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ, ಮಹೇಶ ಹೊನ್ನಜ್ಜೇರ, ನಿತ್ಯಾನಂದ ಕುಂದಾಪುರ, ಈರಣ್ಣ ಮಾಕನೂರ, ಕುಮಾರ ಕೊಂಡಜ್ಜಿ, ರೇವಣೆಪ್ಪ ಗೌಡಶಿವಣ್ಣನವರ, ಕುಮಾರ ಗೌಡರ, ಕೊಟ್ರೇಶಪ್ಪ ಎಮ್ಮಿ, ಮಂಜುನಾಥ ದುಗ್ಗತ್ತಿ ಸೇರಿದಂತೆ ಮತ್ತಿತರರು ಇದ್ದರು.