ರಾಣೆಬೆನ್ನೂರ

ಉಚಿತ ಮಾಸ್ಕ್‌, ದವಸ ಧಾನ್ಯಗಳ ಕಿಟ್ ವಿತರಣೆ

ಉಚಿತ ಮಾಸ್ಕ್‌, ದವಸ ಧಾನ್ಯಗಳ ಕಿಟ್ ವಿತರಣೆ
ರಾಣಿಬೆನ್ನೂರ: ನಗರದ ರೋಟರಿ ಸಂಸ್ಥೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾಽ ಬಸವರಾಜ ಕೇಲಗಾರ ಮಾತನಾಡಿದರು.

ರಾಣಿಬೆನ್ನೂರ 14:  ರೋಟರಿ ಸಂಸ್ಥೆಯು ಸ್ವಂತಕ್ಕಿಂತ ಮೊದಲು ಸೇವೆ ಎಂಬ ಧ್ಯೇಯೋದ್ದೇಶವನ್ನಿಟ್ಟುಕೊಂಡು ಅನೇಕ ಸಮಾಜಮುಖಿ ಕಾರ್ಯವನ್ನು ಮಾಡುತ್ತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಟ್ಯಾಗೋರ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಡಾ. ಬಸವರಾಜ ಕೇಲಗಾರ ಹೇಳಿದರು. 

ಬುಧವಾರ ನಗರದ ರೋಟರಿ ಸಂಸ್ಥೆಯಲ್ಲಿ ಏರಿ​‍್ಡಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ನಗರದ ಜನತೆಗೆ ಉಚಿತ ಮಾಸ್ಕ್‌, ದವಸ ಧಾನ್ಯಗಳ ಕಿಟ್ ವಿತರಣೆ, ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಜನರಿಗೆ ನೆರವಾಗಿದೆ ಎಂದರು. 

ಇಂತಹ ಸ್ಥಳೀಯ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಸಮಾರಂಭವು ಸಹ ಜು.16 ರಂದು ಮಧ್ಯಾಹ್ನ.3.30ಕ್ಕೆ ಮಾಗೋಡ ರಸ್ತೆಯಲ್ಲಿರುವ ರೋಟರಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಡಾ. ಎಲ್‌.ಕೆ. ಚಳಗೇರಿ ನೂತನ ಅಧ್ಯಕ್ಷರಾಗಿ, ಡಾ.ಎಚ್‌.ಎಸ್‌. ಬೆಳವಿಗಿ ಕಾರ್ಯದರ್ಶಿಯಾಗಿ ಹಾಗೂ ಇನ್ನರ್‌ವೀಲ್ ಸಂಸ್ಥೆಯ ಅಧ್ಯಕ್ಷರಾಗಿ ಪೂಜಾ ವಿರುಪಣ್ಣವರ, ಕಾರ್ಯದರ್ಶಿಯಾಗಿ ಸುಶ್ಮಾ ನಾಡಿಗೇರ ಇವರುಗಳು  ಆಯ್ಕೆಯಾಗಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಕೆ.ವಿ.ಶ್ರೀನಿವಾಸ, ಡಾ. ಎಲ್‌.ಕೆ.ಚಳಗೇರಿ, ಕುಮಾರ ಮುಷ್ಠಿ, ಸುಭಾಸ ಭೂತೆ, ಪೂಜಾ ವಿರುಪಣ್ಣನವರ, ಸುಶ್ಮಾ ನಾಡಿಗೇರ, ಚೇತನ ಮೇರಾ​‍್ವಡೆ ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ