ಹೊಸಪೇಟೆ

ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಚಿತ ಅರೋಗ್ಯ ತಪಾಸಣಾ ಶಿಬಿರ

ಹೊಸಪೇಟೆಯ 16 : ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ 26 ನೇ ವಾರ್ಡ ಚಪ್ಪರದಹಳ್ಳಿ ಕಬ್ಬೇರಪೇಟೆ ಶಾಲೆಯಲ್ಲಿ ಹೊಸಪೇಟೆಯ ಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬಲಿಜ ಯುವ ವೇದಿಕೆ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.  

ಕಾರ್ಯಕ್ರಮವನ್ನು ಉದ್ದೇಶಿಸಿ ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್‌. ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಆರೋಗ್ಯವೇ ಮಾಹಾ ಬಾಗ್ಯ ವಾಗಿರುವುದರಿಂದ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಎನ್ನದೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕಾಯಿಲೆಗಳು ಬಂದಮೇಲೆ ಚಿಕಿತ್ಸೆ ಪಡೆಯುವ ಬದಲು ಬರದ ಹಾಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.  

ಸ್ಥೂಲಕಾಯ ಮದುಮೇಹಕ್ಕು ಹಾಗು ಹೃದಯಾಘಾತಕ್ಕೂ ಅವಿನಾಭಾವ ಸಂಭಂಧವಿದ್ದು ಅನಾವಶ್ಯಕ ಜಂಕ್ ಫುಡ್ ಗಳಿಂದ ದೂರವಿರಿ ಹಾಗು ಯುವಕರು ಹಲವಾರು ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯವನ್ನು ಹಾಳು ಮಾಡಿಕೊಂಡು ಕುಟುಂಬಕ್ಕೆ ಹೊರೆಯಾಗಿರುವಂತಹ ನಿದರ್ಶನಗಳನ್ನು ಸಹ ಇಂದು ನಾವು ಕಾಣುತ್ತಿದ್ದೇವೆ. ನಿಯಮಿತ ವ್ಯಾಯಾಮಗಳು, ನಡಿಗೆಗಳು ಸಹ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿರುತ್ತವೆ ಎಂದರು. ಮುನ್ನೆಚ್ಚರಿಕೆ ಪ್ರಯುಕ್ತ ಇಂತಹ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

 ಇದೇ ಸಂಧರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಭಾಸ್ಕರ್ ಡಿ, ನಗರಸಭೆ ಸದ್ಯಸರಾದ ಕೆ. ಗೌಸ್, ದಾದ ಖಲಂದರ್, ಹಾಗೂ ಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ಯಾಮ್ ಸುಂದರ್, ಜಿಲ್ಲಾಧ್ಯಕ್ಷರು ಹಾಗೂ ಪಧಾದಿಕಾರಿಗಳು ಗುಜ್ಜಲ್ ಗಣೇಶ್, ಶ್ರೀಮತಿ ಕವಿತಾ ಈಶ್ವರ್ ಸಿಂಗ್, ಮತಿ ಸರಳ ಕಾವ್ಯ ,ಹಾಗೂ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ