ಶಿರಗುಪ್ಪಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ; ವೈದ್ಯಕೀಯ ಕ್ಷೇತ್ರದಲ್ಲಿ ಭೋಮಾಜ ಪರಿವಾರದ ಸೇವೆ ಶ್ಲಾಘನೀಯ: ಅಭಯಕುಮಾರ ಅಕಿವಾಟೆ..!
ಲೋಕದರ್ಶನ ವರದಿ
ಕಾಗವಾಡ 05: ಭೋಮಾಜ ಪರಿವಾರದ ಹಿರಿಯರಾದ ದಿ. ದಾದಾ ಬೋಮಾಜ ಅವರು ಬಡತನದಲ್ಲಿ ಕಷ್ಟಪಟ್ಟು ದುಡಿದು, ತಮ್ಮ ಮುಂದಿನ ಪೀಳಿಗೆಗೆ ಶಿಕ್ಷಣ ನೀಡಿದರ ಪರಿಣಾಮವಾಗಿ ಇಂದು ಈ ಭಾಗದಲ್ಲಿ ಭೋಮಾಜ ಪರಿವಾರದ ಅನೇಕ ಹೆಸರಾಂತ ವೈದ್ಯರು ಸೇವೆ ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಭೋಮಾಜ ಕುಟುಂಬದವರ ಸೇವೆ ಶ್ಲಾಘನೀಯವಾಗಿದೆ ಎಂದು ಶಿರಗುಪ್ಪಿಯ ಹಿರಿಯ ನ್ಯಾಯವಾದಿ ಅಭಯಕುಮಾರ ಅಕಿವಾಟೆ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ರವಿವಾರ ದಿ. 05 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಉಗಾರ ರಸ್ತೆಯಲ್ಲಿರುವ ಶ್ರೀ 1008 ಪಾರ್ಶ್ವನಾಥ ಜೈನ ಭವನದಲ್ಲಿ ಶಿರೋಳ ತಾಲೂಕಿನ ಖಿದ್ರಾಪೂರದ ದಾದಾ ಪಾಯಪ್ಪ ಭೋಮಾಜ ಮತ್ತು ಅಮ್ಮಕ್ಕ ದಾದಾ ಭೋಮಾಜ ಸಾರ್ವಜನಿಕ ಸೇವಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಭೋಮಾಜ ಪರಿವಾರದ ವೈದ್ಯರು ಜೊತೆಗೆ ಮಿರಜ ಪಟ್ಟಣ ಮತ್ತು ಶಿರಗುಪ್ಪಿ ಗ್ರಾಮದ ವೈದ್ಯರೊಂದಿಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿರುವುದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಿದೆ ಎಂದರು. ಭೋಮಾಜ ಸಾರ್ವಜನಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪದ್ಮರಾಜ ಪಾಟೀಲ ತಮ್ಮ ಅನಿಸಿಕೆ ಹಂಚಿಕೊಂಡರು. ಶಿಬಿರವನ್ನು ಗಣ್ಯರು ಸಸಿಗೆ ನೀರೇರೆದು ಚಾಲನೆ ನೀಡಿದರು. ಮಧ್ಯಾಹ್ನ 2 ಗಂಟೆಯ ವರೆಗೆ ನಡೆದ ಶಿಬರದಲ್ಲಿ ಸುಮಾರು 400 ಜನರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ವೇಳೆ ಡಾ. ಜೆ.ಎನ್. ಭೋಮಾಜ, ಡಾ. ನೀತಾ ಭೋಮಾಜ, ಡಾ. ಎಂ.ಎನ್. ಭೋಮಾಜ, ಡಾ. ವೈಶಾಲಿ ಭೋಮಾಜ, ಡಾ. ಅರವಿಂದ ಲಾಂಡೆ, ಡಾ. ಶೋಭಾ ಲಾಂಡೆ, ಡಾ. ಶರದ ಭೋಮಾಜ, ಡಾ. ಪದ್ಮಪ್ರಿಯಾ ಭೋಮಾಜ, ಡಾ. ಪೂಜಾ ಭೋಮಾಜ, ಡಾ. ವಿಜಯ ಕುಲಕರ್ಣಿ, ಡಾ. ಅರಿಹಂತ ಪಾಟೀಲ, ಡಾ. ಯೋಗೇಶ ಜಂಬಗೆ, ಡಾ. ದೀಪಾಂಜಲಿ ಪಾಟೀಲ, ಡಾ. ಪದ್ಮಜಾ ಪಾಟೀಲ, ಡಾ. ವಿಕ್ರಾಂತ ಮಗದುಮ್ಮ, ಡಾ. ಸ್ವಪ್ನಿಲ ಅಮಾನಾಪುರೆ, ಸಿಬಿಕೆಎಸ್ಎಸ್ ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ಶಾಂತಿಸಾಗರ ಸಹಕಾರಿಯ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ, ಬಾಬಾಸಾಬ ಕಾಗವಾಡೆ, ಅಶೋಕ ಕಾತ್ರಾಳೆ, ಅನೀಲ ಚೌಗುಲೆ, ಬಾಬು ಕಾರದಗೆ, ಶ್ರೇಯಾಂಶ ನಾಂದಣಿ, ಕಿರಣ ಬೋಲೆ, ಶಿರಗುಪ್ಪಿಯ ವೈದ್ಯರಾದ ಡಾ. ಅಮೋಲ ಸರಡೆ, ಡಾ. ಮನೋಜ ಮಿಣಚೆ, ಡಾ. ಜಿತೇಂದ್ರ ಖೋತ, ಡಾ. ಸುಕುಮಾರ ಚೌಗುಲೆ, ಡಾ. ರಾಜೇಂದ್ರ ಅಕಿವಾಟೆ, ಡಾ. ರವಿ ಕುರುಂದವಾಡೆ ಸೇರಿದಂತೆ ಅನೇಕ ವೈದ್ಯರು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.