ಕಾಗವಾಡ

ಮಿರಜ್‌ನಲ್ಲಿ ಜೂನ್ 21 ರಂದು ಬಂಜೆತನ ನಿವಾರಣೆಯ ಉಚಿತ ಆರೋಗ್ಯ ಶಿಬಿರ

ಮಿರಜ್‌ನಲ್ಲಿ ಜೂನ್ 21 ರಂದು ಬಂಜೆತನ ನಿವಾರಣೆಯ ಉಚಿತ ಆರೋಗ್ಯ ಶಿಬಿರ

ಲೋಕದರ್ಶನ ವರದಿ 

ಕಾಗವಾಡ 18 :  ಮಹಾರಾಷ್ಟ್ರದ ಮಿರಜ ಪಟ್ಟಣದ ಸಚೀನ ಆಸ್ಪತ್ರೆಯಲ್ಲಿ ರವಿವಾರ ದಿ. 21 ರಂದು ಬಂಜೆತನ ನಿವಾರಣೆ, ಸ್ತ್ರೀರೋಗ, ಮಹಿಳೆಯರ ಮತ್ತು ಪುರಷರ ಲೈಂಗಿಕ ಸಮಸ್ಯೆಗಳ ಕುರಿತು ಉಚಿತ ಆರೋಗ್ಯ ತಪಾಸನೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಖ್ಯಾತ ಸ್ತ್ರೀರೋಗ ತಜ್ಞ ಡಾ. ಸಚೀನ ಸುಗಣ್ಣವರ ತಿಳಿಸಿದ್ದಾರೆ. ಮಿರಜದಲ್ಲಿನ ಸಚೀನ ಆಸ್ಪತ್ರೆಯು ಬಂಜೆತನ ನಿವಾರಣೆ, ಸ್ತ್ರೀರೋಗ, ಪುರುಷ ಹಾಗೂ ಮಹಿಳೆಯರ ಲೈಂಗಿಕ ಸಮಸ್ಯೆಗಳ ನಿವಾರಣೆ ಕುರಿತು ಕಳೆದ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಉಪಚಾರ ಶಿಬಿರಗಳನ್ನು ಏರಿ​‍್ಡಸಿ, ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುತ್ತಿದೆ. ಈ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ, ಅತ್ಯಾಧುನಿಕ ಯಂತ್ರೋಪಕರಣಗಳು ಜೊತೆಗೆ ಆಸ್ಪತ್ರೆಯು ಹೈಟೆಕ್ ಸೌಲಭ್ಯವನ್ನು ಹೊಂದಿದೆ. ಪ್ರತಿ ತಿಂಗಳು ಮಹಿಳೆಯರ ಎಲ್ಲ ಲೈಂಗಿಕ ರೋಗಗಳ ಮತ್ತು ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಉಚಿತವಾಗಿ ಹಮ್ಮಿಕೊಳ್ಳುತ್ತಿದೆ. 


ಸುದ್ದಿ ಓದಿ