ಸಂಬರಗಿಯಲ್ಲಿ ಸ್ಪಂದನ ಹೃದಯಾಲಯದಿಂದ ಉಚಿತ ಆರೋಗ್ಯ ಶಿಬಿರ
ಸಂಬರಗಿ 09 ; ಮಿರಾಜ್ ಸಾಂಗ್ಲಿಯ ಸ್ಪಂದನ ಹೃದಯಾಲಯ ಸೂಪರ್ ಸ್ಪೆಷಾಲಿಸ್ಟ್ ಆಸ್ಪತ್ರೆಯ ವತಿಯಿಂದ ಸಂಬರಗಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ಡಾ. ರಿಯಾಜ್ ಮುಜಾವರ್, ಡಾ. ಸಚಿನ್ ಗಾವಡೆ ಹಾಗೂ ಮೋರಿಯಾ ಗ್ರೂಪ್ನ ದೀಪಕ್ ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿವಿಧ ರೀತಿಯ ಆಸ್ಪತ್ರೆ ಪರೀಕ್ಷೆಗಳನ್ನು ನಡೆಸಲಾಯಿತು. ಶಿಬಿರದಲ್ಲಿ 50 ಕ್ಯಾನ್ಸರ್ ರೋಗಿಗಳು, 20 ಮೂತ್ರಶಾಸ್ತ್ರದ ರೋಗಿಗಳು, 40 ಇತರೆ ಕಾಯಿಲೆಗಳ ರೋಗಿಗಳು, 40 ಸಕ್ಕರೆ ಕಾಯಿಲೆ, 80 ಬಿಪಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 210 ಜನರನ್ನು ಪರೀಕ್ಷಿಸಲಾಯಿತು.
ಕರ್ನಾಟಕ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದರು. ಈ ಯೋಜನೆಯ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳುವಂತೆ ವೈದ್ಯರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗಣೇಶ್ ಅವಾಳೆಕರ್, ಡಾ. ಅಮಿತ್ ಜೋಶಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.