ಸೌಂದತ್ತಿ

ಇಂದು ಉಚಿತ ಆರೋಗ್ಯ, ಮಧು ಮೇಹ ತಪಾಸಣಾ ಶಿಬಿರ

ಇಂದು ಉಚಿತ ಆರೋಗ್ಯ, ಮಧು ಮೇಹ ತಪಾಸಣಾ ಶಿಬಿರ

ಲೋಕದರ್ಶನ ವರದಿ

ಸವದತ್ತಿ 16: ಸಾರ್ವಜನಿಕರ ಆರೋಗ್ಯ ದೃಷ್ಠಿಕೋನದಲ್ಲಿ ಮಲಪ್ರಭಾ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಜೈಂಟ್ಸ್ ಗ್ರುಪ್ ಆಪ್ ಸವದತ್ತಿ ಹಾಗೂ ರೇಣುಕಾ ಸಹೇಲಿ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಮಾ 18ರಂದು ಮುಂ. 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ಉಚಿತ ಆರೋಗ್ಯ ಹಾಗೂ ಮಧು ಮೇಹ ತಪಾಸಣಾ ಶಿಬಿರವನ್ನು ಪಟಾದ ಹಿರೋ ಶೋರೂಮ್ ಕೆಳಬಾಗದಲ್ಲಿನ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು  ಜೈಂಟ್ಸ್ ಗ್ರುಪ್ ಆಪ್ ಸವದತ್ತಿ ಸಂಘಟನೆಯ ಅಧ್ಯಕ್ಷ ಯಶ್ವಂತ ಪಾಸ್ತೆ ಹೇಳಿದರು. 

ಅವರು ಜೆ.ಡಿ.ಪಟಾದ ರವರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಉಮೇಶ ಸರದಾರ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಶಿಬಿರದಲ್ಲಿ ಖ್ಯಾತ ತಜ್ಞವೈದ್ಯರಾದ ಡಾ ಸಂದೀಪ ಢೋಣಗಾಂವ ಅವರು ಮಧುಮೇಹ ಥೈರಾಯಿಡ್ ಬೊಜ್ಜು, ಹಾರ್ಮೋನ್ಸ ಸೇರಿದಂತೆ ವಿವಿಧ ರೋಗಗಳ ಬಗ್ಗೆ ತಪಾಸಣೆ ಮಾಡಲಿದ್ದಾರೆ ಎಂದರು. 

 ನಂತರ ನ್ಯಾಯವಾದಿಗಳಾದ ಎಮ್ ಎಮ್ ಎಲಿಗಾರ ಅವರು ಮಾತನಾಡಿ  ಜೈಂಟ್ಸ್ ಗ್ರುಪ್ ಆಪ್ ಸವದತ್ತಿ ಹಾಗೂ ರೇಣುಕಾ ಸಹೇಲಿ, ಇವರುಗಳ ಸಹಯೋಗದಲ್ಲಿ ಈ ಶಿಬಿರ ನಡೆಯುತ್ತಿದ್ದು, ಚಿಕ್ಕಮಕ್ಕಳು, ಸ್ತ್ರೀಯರು ಮತ್ತು ಪುರುಷರು ಹಾಗೂ ವಯೋವೃದ್ಧರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.

ಜಗದೀಶ ಹಂಪಣ್ಣವರ ಮಾತನಾಡಿ ಈ ನಮ್ಮ ಎರಡೂ ಸಂಘಟನೆಗಳು ಸಾರ್ವಜನಿಕ ಸೇವೆ ಮಾಡುವಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡು ಯಶಸ್ವಿಯಾದ ಕಾರ್ಯಕ್ರಮಗಳನ್ನು ಮಾಡುತ್ತಿವೆ ಎಂದರು. ಜಾವೇದ ಪಠಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ