ಹೂವಿನ ಹಡಗಲಿ

ಅರಳಿದ ಪ್ರತಿಭೆ ಆಶಾಭಾನುಗೆ ಉಚಿತ ಶಿಕ್ಷಣ

ಅರಳಿದ ಪ್ರತಿಭೆ ಆಶಾಭಾನುಗೆ  ಉಚಿತ ಶಿಕ್ಷಣ

ಲೋಕದರ್ಶನ ವರದಿ 

ಹೂವಿನಹಡಗಲಿ  24:  ತಾಲ್ಲೂಕಿನ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಬಡ ವಿದ್ಯಾರ್ಥಿನಿ ಡಿ. ಆಶಾಭಾನು ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 618 (ಶೇ 98.88) ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 100 ಅಂಕ, ಕನ್ನಡದಲ್ಲಿ 123, ಇಂಗ್ಲಿಷ್, ಗಣಿತದಲ್ಲಿ 99, ವಿಜ್ಞಾನದಲ್ಲಿ 97 ಅಂಕ ಪಡೆದಿದ್ದಾರೆ. ಹೊಳಗುಂದಿ ಗ್ಲೋಬಲ್ ಪಿಯು ಕಾಲೇಜಿನ ಆಡಳಿತ ಮಂಡಳಿ ಯವರು   ಈ ಸಾಧನೆ ಮಾಡಿದ ವಿದ್ಯಾರ್ಥಿ ಆಶಾಭಾನು ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.’ವಿದ್ಯಾರ್ಥಿನಿಗೆ ಹಾಸ್ಟೆಲ್ ಸಹಿತ ಪಿಯುಸಿ ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಕಲ್ಪಿಸುತ್ತೇವೆ’ ಎಂದು ಕಾಲೇಜು ಪ್ರಾಚಾರ್ಯಮಹೇಶ ಕುಮತಿಮಠ ಹೇಳಿದರು. 


ಸುದ್ದಿ ಓದಿ