ಉಚಿತ ಕಿವಿ ರೋಗಗಳ ತಪಾಸಣೆ ಶಿಬಿರ
ಚಿಕ್ಕೋಡಿ 11: ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಚಿಕ್ಕೋಡಿ ಇವರ ವತಿಯಿಂದ ಉಚಿತ ಕಿವಿ ರೋಗಗಳ ತಪಾಸಣೆ ಶಿಬಿರವನ್ನು ಫೆಬ್ರವರಿ 13 ರಂದು ಬೆಳಿಗ್ಗೆ 09.00 ರಿಂದ ಸಂಜೆ 5:00 ರವರೆಗೆ ಏರಿ್ಡಸಲಾಗಿದೆ. ಶಿಬಿರದಲ್ಲಿ ಕಿವಿ ಸೊರುವುದು, ಕಿವಿ ನೋವು, ಕಿವಿ ಕಡಿಮೆ ಕೇಳಿಸುವುದು, ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಕಿವಿಡುತನ ಈ ರೀತಿಯ ಸಮಸ್ಯೆಗಳು ಇದ್ದಲ್ಲಿ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ವಿಶಿಷ್ಟ ಆಯುರ್ವೇದ ಚಿಕಿತ್ಸೆಗಳಗೆ ರಿಯಾಯತಿ ನೀಡಲಾಗುವುದು. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.