ಕುಷ್ಟಗಿ

ಜು. 1ರಂದು ಉಚಿತ ದಂತ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಜು. 1ರಂದು ಉಚಿತ ದಂತ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಕುಷ್ಟಗಿ 28: ವಿಜಯ ಮಲ್ಟಿ ಸ್ಪೇಷಾಲಿಟಿ ಡೆಂಟಲ್ ಹಾಸ್ಪಿಟಲ್, ಆಯಿಷಿ ಬಿರದಾರ ಗ್ರೂಪ್ಸ್‌ನ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಜು.1 ಶುಕ್ರವಾರ ಬೆಳಿಗ್ಗೆ ಇಲ್ಲಿನ ಸರಕಾರಿ ಆಸ್ಪತ್ರೆ ಬಳಿ ಇರುವ ನಿಲೋಗಲ್ ಕಾಂಪ್ಲೆಕ್ಸ್‌ ನಲ್ಲಿರುವ ವಿಜಯ ಮಲ್ಟಿ ಸ್ಪೇಷಾಲಿಟಿ ಡೆಂಟಲ್ ಹಾಸ್ಪಿಟಲ್ ನಲ್ಲಿ ಉಚಿತ ದಂತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಹಿರಿಯ ವೈದ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಜಯ ಮಲ್ಟಿ ಸ್ಪೇಷಾಲಿಟಿ ಡೆಂಟಲ್ ಹಾಸ್ಪಿಟಲ್ ಮುಖ್ಯ ದಂತ ವೈದ ಡಾ.ವಿಜಯಕುಮಾರ ಬಿರದಾರ ತಿಳಿಸಿದ್ದಾರೆ.  

ಸಂಸದ ಸಂಗಣ್ಣ ಕರಡಿ ಉಚಿತ ದಂತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಹಿರಿಯ ವೈದ್ಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸುವರು.  

ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷ ಹಸನಸಾಬ ದೋಟಿಹಾಳ, ಕೆ.ಶರಣಪ್ಪ ವಕೀಲರು, ರಾಷ್ಟ್ರೀಯ ದಾಳಿಂಬೆ ಬೆಳಗಾರರ ಉಪಾಧ್ಯಕ್ಷ ದೇವೇಂದ್ರ​‍್ಪ ಬಳೂಟಗಿ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಪಿ.ಎಲ್‌.ಡಿ.ಬಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಪ್ರಭು ಶಂಕರಗೌಡ ಪಾಟೀಲ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿರ್ದೇಶಕ ಡಾ.ರವಿಕುಮಾರ ದಾನಿ, ನೇತ್ರ ತಜ್ಞ ಡಾ.ಸುಶೀಲ್ ಖಾಕಂಡಕಿ, ದಂತ ವೈದ ಡಾ.ರೂಪೇಶ್ ನಗರಿ, ಕಸಪ ಅಧ್ಯಕ್ಷ ವಿರೇಶ ಬಂಗಾರ ಶೆಟ್ಟರ್, ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ಪತ್ರಕರ್ತ ಮುಖೇಶ್ ನಿಲೋಗಲ್, ಶರಣ ಬಸವೇಶ್ವರ ಎ.ಪಿ.ಎಂ.ಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಲೆಮಠ, ಸಾಯಿ ಶಂಕರ ವಿ.ಎಸ್‌.ಎಸ್‌.ಎನ್ ಅಧ್ಯಕ್ಷ ಮಲ್ಲಿಕಾರ್ಜುನ ಬಳಿಗಾರ ಸೇರಿದಂತೆ ಇನ್ನೂ ಅನೇಕ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ