ಚಿಕ್ಕೋಡಿ

ದಿ. 25ರಿಂದ ಉಚಿತ ಗುದಗತ ರೋಗಗಳ ತಪಾಸಣೆ ಶಿಬಿರ

ದಿ. 25ರಿಂದ ಉಚಿತ ಗುದಗತ ರೋಗಗಳ ತಪಾಸಣೆ ಶಿಬಿರ

ಚಿಕ್ಕೋಡಿ 23: ಕೆ.ಎಲ್‌.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಬಸವ ಸರ್ಕಲ್ ಚಿಕ್ಕೋಡಿ ಇವರ ವತಿಯಿಂದ ವಿಶ್ವ ಮೂಲವ್ಯಾಧಿ ದಿನದ ಪ್ರಯುಕ್ತ ಉಚಿತ ಮೂಲವ್ಯಾಧಿ (ಪೈಲ್ಸ್‌) ತಪಾಸಣೆ ಶಿಬಿರವನ್ನು ದಿ. 25ರಿಂದ 27ರಂದು ಮುಂಜಾನೆ 09:00 ರಿಂದ ಸಂಜೆ 4:00ರವರೆಗೆ ಏರಿ​‍್ಡಸಲಾಗಿದೆ.  

ಈ ಶಿಬಿರದಲ್ಲಿ ಮೂಲವ್ಯಾಧಿ (ಪೈಲ್ಸ್‌), ಭಗಂದರ (ಫಿಸ್ತುಲಾ), ಫಿಶರ, ಕುರು, ಪೈಲೋನೈಡಲ್ ಸೈನಸ್ (ನಾಡಿ ವೃಣ), ಗುದನಾಳದ ಸರಿಕೆ (ಹಿಗ್ಗುವಿಕೆ), ಗುದದ್ವಾರದ ಗಡ್ಡೆಗಳು, ಮಲಬದ್ಧತೆ, ಮಲ ವಿಸರ್ಜನೆ ಸಮಯದಲ್ಲಿ ರಕ್ತಸ್ರಾವ, ಉರಿ, ನೋವು ಸಮಸ್ಯೆಗಳಿಗೆ ಆಯುರ್ವೇದ ವೈದ್ಯರಿಂದ ಉಚಿತ ತಪಾಸಣೆ ಮಾಡಲಾಗುವುದು. ವಿಶಿಷ್ಟ ಆಯುರ್ವೇದ ಚಿಕಿತ್ಸೆಗಳಾದ ಕ್ಷಾರಕರ್ಮ, ಕ್ಷಾರಸೂತ್ರ, ಶಸ್ತ್ರಚಿಕಿತ್ಸೆ ಮತ್ತು ಓಷಧಿಗಳಿಂದ ರಿಯಾಯತಿ ದರದಲ್ಲಿ ಚಿಕಿತ್ಸೆ ಮಾಡಲಾಗುವುದು.  

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ ಸಂಪರ್ಕಿಸಿ 08338275100. 


ಸುದ್ದಿ ಓದಿ