ಉಚಿತ ಯೋಗ ಶಿಬಿರ
ಸಂಕೇಶ್ವರ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ಯೋಗ ಶಿಬಿರಗಳನ್ನು ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ, ಯಲ್ಲಾಪೂರ ಸೆಮ್ಕಾ ನವ ದೆಹಲಿ ಹಾಗೂ ಸಂಕೇಶ್ವರನ ವಂದೇ ಮಾತರಂ ಯೋಗ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜೂ. 18-ರಿಂದ 21ರವರೆಗೆ 4 ದಿನಗಳ ಉಚಿತಯೋಗ ಶಿಬಿರವನ್ನು ಸಂಕೇಶ್ವರದ ನೇಸರಿ ಗಾರ್ಡನ ಡಿಲಕ್ಸನಲ್ಲಿ ಆಯೋಜಿಸಲಾಗಿದೆ. ಯೋಗ ಶಿಬಿರವು ಪ್ರತಿದಿನ ಬೆಳ್ಳಿಗ್ಗೆ 5.45 ರಿಂದ 7.00ರ ವರೆಗೆ ನಡೆಯಲಿದೆ. ಪ್ರಖ್ಯಾತ ನಗೆ ಭಾಷಣಕಾರರು ಹಾಗೂ ಯೋಗ ಪಟುಗಳಾದ ಶ್ರೀ.ಅಜಯ ಸಾರಾಪುರೆಯವರು ಯೋಗಾಭ್ಯಾಸವನ್ನು ಮಾಡಿಸಲಿದ್ದಾರೆ. ಕಾರಣ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಈ ಮೂಲಕ ವಿನಂತಿಸಿದ್ದಾರೆ