ಜನರನ್ನು ಸೋಮಾರಿಗಳನ್ನಾಗಿಸುತ್ತಿವೆ ಉಚಿತ ಗ್ಯಾರಂಟಿ ಭಾಗ್ಯಗಳು: ಭಾಸ್ಕರ್ ರಾವ್
ಮಾಂಜರಿ 01: ಕರ್ನಾಟಕ ರಾಜ್ಯದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನರಿಗೆ ಉಚಿತ ಗ್ಯಾರಂಟಿ ಮತ್ತು ಭಾಗ್ಯಗಳ ಯೋಜನೆಗಳ ಮುಖಾಂತರ ಸೋಮಾರಿಗಳನ್ನು ಮಾಡುತ್ತಿದ್ದು ಇದು ವಿಷಾದನೀಯ. ನಿಜವಾದ ರಾಜ್ಯ ಸರ್ಕಾರ ಸರ್ವಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣ ನೀಡಬೇಕು ಅದೇ ಪ್ರಕಾರ ಯುವಕರಿಗೆ ಉದ್ಯೋಗಾವಕಾಶ ನೀಡಬೇಕೆಂದು ನಿವೃತ್ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಮುಖಂಡ ಜ್ಯೋತಿರಾಮ್ ಯಾದವ್ ಇವರ ಮನೆಯಲ್ಲಿ ಅವರ ಅಭಿಮಾನಿ ಬಳಗದಿಂದ ಆಯೋಜಿಸಲಾದ ಸನ್ಮಾನ ಸಮಾರಂಭ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಆಡಳಿತ ನಡೆಸುತ್ತಿರುವ ಸರ್ಕಾರ ಚುನಾವಣೆಯಲ್ಲಿ ಸರ್ವಸಾಮಾನ್ಯ ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಯಾವುದೇ ಯೋಜನೆಯನ್ನು ಇನ್ನುವರಿಗೆ ಅನುಷ್ಠಾನಕ್ಕೆ ತಂದಿಲ್ಲ. ಕೇವಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹಲಕ್ಷ್ಮಿ ಬಿಟ್ಟರೆ ಯಾವುದೇ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿಲ್ಲ. ರಾಜ್ಯ ಸರ್ಕಾರ ನೀಡಿರುವ ಈ ಭಾಗ್ಯದ ಯೋಜನೆಗಳಿಂದ ಸಾಮಾನ್ಯ ಜನ ಸೋಮಾರಿ ಆಗುತ್ತಿದ್ದಾರೆ. ಇಂದು ರಾಜ್ಯದಲ್ಲಿ ಹಲವಾರು ಭಾಗಗಳಲ್ಲಿ ಸರ್ವಸಾಮಾನ್ಯ ಜನರಿಗೆ ಆರೋಗ್ಯ ಸೇವೆ ತಲುಪಿಲ್ಲ. ಆದ್ದರಿಂದ ಬಡ ಕುಟುಂಬದವರು ಹಲವಾರು ಕಾಯಿಲೆಗಳಿಂದ ಬಳಲುತಿದ್ದು ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರ ಪ್ರತಿಯೊಂದು ಗ್ರಾಮದಲ್ಲಿ ಉಚಿತವಾಗಿ ಆರೋಗ್ಯ ಸೇವೆ ನೀಡುವ ಜತೆಗೆ ಯುವಕರಿಗೆ ಉಚಿತ ಶಿಕ್ಷಣ ನೀಡುವ ಜತೆಗೆ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಬೇಕೆಂದು ಅವರು ಹೇಳಿದರು.
ನಿವೃತ್ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಜ್ಯೋತಿರಾಂ ಯಾದವ್ ಅವರು ಅವರ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ದೀಪಕ್ ಗಾಯಕವಾಡ ಪ್ರವೀಣ್ ಘಾಟಿಗೆ ದಾದಾಸೊ ಭೋಜಕರ, ಮನೋಹರ ಭೋಜಕರ್, ನೇಮಿನಾಥ್ ವಸವಾಡೇ, ಸಂದೀಪ್ ವಾಡಕರ್, ಸಂಭೂಗೌಡ ಪಾಟೀಲ್, ನಿತಿನ ಜಾದವ್, ಸುಶಾಂತ್ ಯಾದವ್, ಇನ್ನಿತರ ಅವರ ಅಭಿಮಾನಿ ಹಾಜರಿದ್ದರು.