ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ: ಅರ್ಹ ತರಬೇತುದಾರರಿಂದ ಅರ್ಜಿ ಆಹ್ವಾನ
ಹೊಸಪೇಟೆ (ವಿಜಯನಗರ) 22: ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಆರು ತಾಲ್ಲೂಕುಗಳ ವಿದ್ಯಾವಂತ ಯುವ ಆಕಾಂಕ್ಷಿಗಳಿಗೆ ವಿವಿಧ ರೀತಿಯ ಟಿಇಟಿ, ಎಫ್ಡಿಎ, ಎಸ್ಡಿಎ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಬ್ಯಾಂಕಿಂಗ್, ಸ್ಟಾಫ್ ಸೆಲೆಕ್ಷನ್ ಕಮಿಶನ್ (ಖಖಅ) ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುನರ್ಮನನ (ಓರಿಯಂಟೇಷನ್) ಅಥವಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸದರಿ ತರಬೇತಿಯನ್ನು ಸಂಘಟಿಸಲು ಮತ್ತು ನೀಡಲು ಇಚ್ಚಿಸುವ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನ ಜಿಲ್ಲಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಅನಿರುದ್ಧ ಪಿ.ಶ್ರವಣ್ ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆ.08 ಆಗಿರುತ್ತದೆ.ತರಬೇತಿಯನ್ನು ಜಿಲ್ಲಾಡಳಿತ ಸಂಘಟಿಸುವುದು. ತರಬೇತಿಗೆ ನೋಂದಾಯಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡಲಾಗುವುದು (ತರಬೇತಿಯ ಸಂಖ್ಯೆಯು ಕೋಣೆಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ). ವಿದ್ಯಾರ್ಥಿಗಳು ಕಾಲೇಜಿಗೆ ತರಬೇತಿಯ ಸಮಯವನ್ನು ಹಾಜರಾಗಲು ತೊಂದರೆಯಾಗದಂತೆ ನಿಗಧಿಪಡಿಸಲಾಗುವುದು. ತರಬೇತಿಯನ್ನು ಆಯಾ ತಾಲ್ಲೂಕ ಕೇಂದ್ರ ಸ್ಥಳಗಳಲ್ಲಿ ಸಂಘಟಿಸಲಾಗುವುದು. ತರಬೇತುದಾರರಿಗೆ ಗಂಟೆಗಳು/ಅವಧಿಯ ಆಧಾರದ ಮೇಲೆ ಸಂಭಾವನೆಯನ್ನು ಪಾವತಿಸಲಾಗುವುದು. ತರಬೇತುದಾರರಿಗೆ ಪ್ರಯಾಣ ಭತ್ಯೆ ಹಾಗೂ ಉಚಿತ ವಸತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅರ್ಹತೆಗಳು: ತರಬೇತುದಾರರು ಕನಿಷ್ಠ ಎರಡು (2) ವರ್ಷಗಳ ಕಾಲ ಪ್ರತಿಷ್ಟಿತ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಿದ ಅನುಭವ ಇರತಕ್ಕದ್ದು. ಯಾವ ತರಬೇತುದಾರರಿಗೆ ಇಂತಹ ತರಬೇತಿ ಶಿಬಿರಗಳನ್ನು ಆಯೋಜಿಸಲು ಅಥವಾ ಸಂಘಟಿಸಲು ಆಸಕ್ತಿಯಿರುವವರು ನಿಗಧಿಪಡಿಸಿದ ನಮೂನೆಯಲ್ಲಿ ಖಠಿಠರಡಿಣ.ತರಿಚಿಥಿಚಿಟಿಚಿರಚಿಡಿಚಿಅರಟಚಿಟ.ಛಿಠ ಇ-ಮೇಲ್ಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಣಣಠಿ://ತರಿಚಿಥಿಚಿಟಿರಚಿಡಿಚಿ.ಟಿಛಿ.ಟಿ ವೆಬ್ ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿಜಯನಗರ ಜಿಲ್ಲಾಡಳಿತ ಕಚೇರಿ ಹಾಗೂ ದೂ.08394-295655 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.