ಬೆಳಗಾವಿ

ಸೆಂಡೂರು ಗ್ರಾಮದಲ್ಲಿ ಉಚಿತ ಗೇರು (ಕಾಜು) ಸಸಿ ವಿತರಣೆ: ತಾಂತ್ರಿಕ ತರಬೇತಿ

ಸೆಂಡೂರು ಗ್ರಾಮದಲ್ಲಿ ಉಚಿತ ಗೇರು (ಕಾಜು) ಸಸಿ ವಿತರಣೆ: ತಾಂತ್ರಿಕ ತರಬೇತಿ

          ನಿಪ್ಪಾಣಿ 10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್‌ ನಿಪ್ಪಾಣಿ-1 ತಾಲೂಕು ಹಾಗೂ ವಿಜಯಲಕ್ಷ್ಮಿ ಫೌಂಡೇಶನ್, ಮೂಡಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಸೆಂಡೂರು ಗ್ರಾಮದಲ್ಲಿ ಉಚಿತ ಗೇರು (ಕಾಜು) ಸಸಿ ವಿತರಣೆ ಮತ್ತು ತಾಂತ್ರಿಕ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 

         ಕಾರ್ಯಕ್ರಮದಲ್ಲಿ ನಿಪ್ಪಾಣಿ-1 ತಾಲೂಕಿನ ಯೋಜನಾಧಿಕಾರಿ ಮಂಜುನಾಥ ಎಚ್‌. ಅವರು ರೈತರಿಗೆ ಗೇರು ಸಸಿಗಳನ್ನು ವಿತರಿಸಿ, ಯೋಜನೆಯ ಉದ್ದೇಶ ಹಾಗೂ ವಿವಿಧ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ಯೋಜನೆಯಡಿ ನಿಪ್ಪಾಣಿ ತಾಲೂಕಿನ 30 ರೈತರಿಗೆ ಒಟ್ಟು 2,000 ಗೇರು (ಕಾಜು) ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಸಂಜಯ್ ಪಾಟೀಲ್, ಹಿರಿಯ ವಿಜ್ಞಾನಿಗಳು, ಕೃಷಿ ಸಂಶೋಧನಾ ಕೇಂದ್ರ, ನಿಪ್ಪಾಣಿ, ಅವರು ಗೇರು ಕೃಷಿಯ ಆಧುನಿಕ ತಾಂತ್ರಿಕ ವಿಧಾನಗಳು, ಸಮರ​‍್ಕ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆಯುವ ಕ್ರಮಗಳ ಕುರಿತು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಗೇರು (ಗೋಡಂಬಿ) ಉತ್ತಮ ಆದಾಯ ತರುವ ವಾಣಿಜ್ಯ ಬೆಳೆಯಾಗಿದ್ದು, ರೈತರು ಇದನ್ನು ವೈಜ್ಞಾನಿಕ ವಿಧಾನದಲ್ಲಿ ಬೆಳೆಸುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದರು.  

ಪ್ರಗತಿಪರ ರೈತರಾದ ಅಶೋಕ್ ತೋಡ್ಕಾರ್ ಹಾಗೂ ಸಂಭಾಜಿ ತೊಂದಳೆ, ಒಕ್ಕೂಟದ ಅಧ್ಯಕ್ಷ ರಾಜು ನಾಯಕ್, ಯೋಜನೆಯ ಕೃಷಿ ಮೇಲ್ವಿಚಾರಕ ಸುರೇಶ್ ಹಾಲವರ, ವಲಯ ಮೇಲ್ವಿಚಾರಕ ಗುರುನಾಥ್, ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮದ ಅನೇಕ ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕ ಸುರೇಶ್ ಹಾಲವರ ನಿರೂಪಿಸಿದರು. ವಲಯ ಮೇಲ್ವಿಚಾರಕ ಗುರುನಾಥ್ ವಂದನಾರೆ​‍್ಣ ಸಲ್ಲಿಸಿದರು. 


ಸುದ್ದಿ ಓದಿ