ಉಚಿತ ಎಲುಬು ಸಾಂದ್ರತೆ ತಪಾಸಣಾ ಶಿಬಿರ
ಚಿಕ್ಕೋಡಿ 15: ಕೆಎಲ್ಇ ಆಯುರ್ವೇದ ಆಸ್ಪತ್ರೆ, ಚಿಕ್ಕೋಡಿಯ ಕಾಯಚಿಕಿತ್ಸಾ ಮತ್ತು ಪಂಚಕರ್ಮ ವಿಭಾಗ ಹಾಗೂ ಝಂಡು ಇಮಾಮಿ ಲಿ. ಇವರ ಸಹಯೋಗದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ಯ ಉಚಿತ ಎಲುಬು ಸಾಂದ್ರತೆ ತಪಾಸಣಾ ಶಿಬಿರವನ್ನು 16 ಡಿಸೆಂಬರ್ 2021 ರಂದು ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆಏರಿ್ಡಸಲಾಗಿದೆ.ಶಿಬಿರದಲ್ಲಿ ಎಲುಬಿನ ಸವಕಳಿಯಿಂದ ಉಂಟಾಗುವ ತೊಂದರೆಗಳಾದ ಅಸ್ಥಿರಂಧ್ರತೆ, ಸಂಧಿನೋವು, ಬೆನ್ನು ನೋವು, ಕುತ್ತಿಗೆ ನೋವು, ಎಲುಬು ಮುರಿತ ಮೊದಲಾದ ಸಮಸ್ಯೆಗಳಿಗೆ ತಜ್ಞ ವೈದ್ಯರುಗಳಿಂದ ವಿಶಿಷ್ಟ ಯಂತ್ರದ ಮೂಲಕ ಉಚಿತವಾಗಿ ತಪಾಸಣೆ ಮಾಡಲಾಗುವುದು. ಎಲುಬಿನ ಸಮಸ್ಯೆಗಳಿಗೆ ಆಯುರ್ವೇದ ಪಂಚಕರ್ಮ ಚಿಕಿತ್ಸಾ ವಿಧಾನಗಳಿಂದ ಮತ್ತು ನೈಸರ್ಗಿಕ ಓಷಧಿಗಳ ಮೂಲಕ ಫಲಕಾರಿ ಚಿಕಿತ್ಸೆಯನ್ನು ನೀಡಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಂಶುಪಾಲರು ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ 9945779554 ಸಂಪರ್ಕಿಸಿ.