ನಾಲ್ಕನೇ ಲಾಕ್ ಡೌನ್: ಕೇಂದ್ರದಿಂದ ಶೀಘ್ರ ಹೊಸ ಮಾರ್ಗಸೂಚಿ ಪ್ರಕಟ
ನವದೆಹಲಿ, ಮೇ 15, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ 4.0 ಲಾಕ್ ಡೌನ್ ವಿಸ್ತರಣೆಯ ಮಾರ್ಗಸೂಚಿ ಇಂದು, ನಾಳೆ ಪ್ರಕಟವಾಗುವ ಸಂಭವವಿದೆ .ಇದೆ 18 ರಿಂದ ಆರಂಭವಾಗುವ ಲಾಕ್ ಡೌನ್ 4.0 ಕುರಿತ ಹೊಸ ಮಾರ್ಗಸೂಚಿಯನ್ನು ಈಗಾಗಲೇ ಕೇಂದ್ರ ಗೃಹ ಇಲಾಖೆ ಸಿದ್ಧಪಡಿಸಿದೆ ಎನ್ನಲಾಗಿದೆ. ಆದರೆ ಕೆಲ ರಾಜ್ಯಗಳಿಂದ ಸಲಹೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವುಗಳ ಳ ಸಲಹೆ ಆಧರಿಸಿ ಇಂದು ಅಥವಾ ನಾಳೆ ಹೊಸ ಮಾರ್ಗಸೂಚಿ ಪ್ರಕಟವಾಗಲಿದೆ . .ಕೇಂದ್ರ ಗೃಹ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ನಾಲ್ಕನೇ ಹಂತದ ಲಾಕ್ ಡೌನ್ ಈವರೆಗಿನ ಮೂರು ಲಾಕ್ ಡೌನ್ ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಬಹಳಷ್ಟು ವಿನಾಯಿತಿ ಒಳಗೊಂಡಿರುತ್ತವೆ. ಬಹುತೇಕ ಎಲ್ಲಾ ವಲಯಗಳಿಗೂ ವಿನಾಯಿತಿ ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 