ರಾಷ್ಟ್ರೀಯ

ತೆಲಂಗಾಣದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ನಾಲ್ವರು ಸಾವು: ಇಬ್ಬರಿಗೆ ಗಾಯ

ತೆಲಂಗಾಣದಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ನಾಲ್ವರು ಸಾವು: ಇಬ್ಬರಿಗೆ ಗಾಯ

ಜಗ್ತಿಯಾಲ್, ನವೆಂಬರ್ 9: ತೆಲಂಗಾಣದ ಈ ಜಿಲ್ಲೆಯ ಕೊರುಟ್ಲಾ ಮಂಡಲದ ಮೋಹನ್‌ ರಾವ್ ಪೇಟ್ ಭಾನುವಾರ ರಾತ್ರಿ ನಿಂತಿದ್ದ ಲಾರಿಯೊಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ಕಾರು ಹೈದರಾಬಾದ್‌ನಿಂದ ಮಲ್ಲಾಪುರಕ್ಕೆ ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ರಮಾದೇವಿ, ಲತಾ, ಶ್ರುತಿ (2) ಮತ್ತು ಚರಣ್ (4 ತಿಂಗಳು) ಎಂದು ಗುರುತಿಸಲಾಗಿದೆ.ಅಪಘಾತ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಓದಿ