ವಿಜಯಪುರ

ಕಸಾಯಿಖಾನೆಗೆ ಸಾಗಿಸುತ್ತಿದ್ದ 4 ಹಸುಗಳ ರಕ್ಷಣೆ; ತದ್ದೇವಾಡಿ ಗ್ರಾಮಸ್ಥರ ಕಾರ್ಯಾಚರಣೆ

ಕಸಾಯಿಖಾನೆಗೆ ಸಾಗಿಸುತ್ತಿದ್ದ 4 ಹಸುಗಳ ರಕ್ಷಣೆ; ತದ್ದೇವಾಡಿ ಗ್ರಾಮಸ್ಥರ ಕಾರ್ಯಾಚರಣೆ

ಚಡಚಣ 05 : ಕಸಾಯಿಖಾನೆಗೆ ಸಾಗಿಸುತ್ತಿದ್ದ ನಾಲ್ಕು ಹಸುಗಳನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.  ಮರಗೂರ ಗ್ರಾಮದಿಂದ ದೇವರನಿಂಬರಗಿ ಗ್ರಾಮದ ಕಡೆಗೆ ಟಂಟಂ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿದ್ದ ವೇಳೆ ಅನುಮಾನಗೊಂಡ ಗ್ರಾಮಸ್ಥರು ವಾಹನವನ್ನು ತಡೆದು ಪರೀಶೀಲಿಸಿದಾಗ, ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.  

ತಕ್ಷಣ ಝಳಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಲ್ಕು ಹಸುಗಳು ಹಾಗೂ ಟಂಟಂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ಕುರಿತು ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಮಾತನಾಡಿ, ಗೋಹತ್ಯೆ ನಿಷೇಧವಿದ್ದರೂ ಅಕ್ರಮವಾಗಿ ಗೋವುಗಳನ್ನು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ