ರಾಷ್ಟ್ರೀಯ

ಮಾಜಿ ಸಚಿವ ಕಾಮಥಮ್ ರಾಮ್ ರೆಡ್ಡಿ ನಿಧನ; ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ

ಮಾಜಿ ಸಚಿವ ಕಾಮಥಮ್ ರಾಮ್ ರೆಡ್ಡಿ ನಿಧನ; ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ

ಹೈದರಾಬಾದ್, ಡಿಸೆಂಬರ್.5: ಮಾಜಿ ಸಚಿವ, ಟಿಆರ್ ಎಸ್ ಹಿರಿಯ ನಾಯಕ ಕಾಮಥಂ ರಾಮ್ ರೆಡ್ಡಿ ದೀರ್ಘಕಾಲಿಕ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ರೆಡ್ಡಿ ಅವರಿಗೆ ವೃದ್ಧಾಪ್ಯ ಸಂಬಂಧಿ ಖಾಯಿಲೆಗಳಿದ್ದವು. ರಾಮ್ ರೆಡ್ಡಿ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ವಿಧಾನಸಭೆ ಸ್ಪೀಕರ್ ಪೋಚರಾಮ್ ಶ್ರೀನಿವಾಸ್ ರೆಡ್ಡಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಮಾಜಿ ಸಚಿವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದು, ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸುತ್ತಿರುವುದಾಗಿ ಶೋಧ ಸಂದೇಶದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೆಡ್ಡಿ, ಅವಿಭಜಿತ ಆಂಧ್ರಪ್ರದೇಶದ ಪಾರ್ಗಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದರು. ಅವರು 1967 ರಲ್ಲಿ ಪಕ್ಷೇತರರಾಗಿ, ಮತ್ತು 1972 ಮತ್ತು 1989 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 1980 ರಲ್ಲಿ ಎಂ ಎಲ್‌ ಸಿಯಾಗಿ ಆಯ್ಕೆಯಾದ ಟಿ ಆರ್‌ ಎಸ್ ನಾಯಕ ರಾವ್, 1977 ರಲ್ಲಿ ಜಲಗಂ ವೆಂಗಲ್ ರಾವ್ ಕ್ಯಾಬಿನೆಟ್‌ನಲ್ಲಿ, 1991 ರಲ್ಲಿ ನೆದುರುಮಲ್ಲಿ ಜನಾರ್ದನ ರೆಡ್ಡಿ ಸಂಪುಟದಲ್ಲಿ ಮತ್ತು 1992 ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕೋಟ್ಲಾ ವಿಜಯಭಾಸ್ಕರ್ ರೆಡ್ಡಿ ಕ್ಯಾಬಿನೆಟ್‌ನಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ರಾವ್ ಅವರು ಬಿಜೆಪಿ ಟಿಕೆಟ್‌ ನಲ್ಲಿ ಸ್ಪರ್ಧಿಸಿದ್ದರು. ಆದರೆ 13,355 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 2018 ರಲ್ಲಿ ಟಿ ಆರ್‌ ಎಸ್‌ ಗೆ ಸೇರ್ಪಡೆಯಾದರು.

1961 ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ (ಕಾನೂನು ಕಾಲೇಜು) ಬಿಎ ಮತ್ತು ಎಲ್‌ ಎಲ್‌ ಬಿ ಅಧ್ಯಯನ ಮಾಡಿದ ರೆಡ್ಡಿ ಇತ್ತೀಚೆಗೆ ರಾಜಕೀಯದಿಂದ ದೂರವಾಗಿದ್ದರು.

ಸುದ್ದಿ ಓದಿ