ಸಿರುಗುಪ್ಪ

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ

 ಸಿರುಗುಪ್ಪ: ಮಾಡುವ ಯಾವುದೇ ಕೆಲಸದ ಹಿಂದೆ ಶ್ರದ್ದೆ ಮತ್ತು ವಿವೇಚನೆಗಳಿದ್ದರೆ  ಅದು ಕ್ರಿಯಾಶೀಲ ಮತ್ತು ಯೋಗ್ಯ ಅನ್ನಿಸಿಕೊಳ್ಳುತ್ತದೆ ಜೀವನದಲ್ಲಿ ಕಷ್ಟಗಳು ಬಂದಾಗಲೇ ವಾಸ್ತವ ಗೊತ್ತಾಗುವುದು ಯಾರು ಕೈ ಹಿಡಿಯುತ್ತಾರೆ ಯಾರೂ ಕೈ ಕೊಡುತ್ತಾರೆ ಎಂದು ಭಾರತ ಸರ್ಕಾರ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ವಾರ್ತಾ ಮತ್ತು ಪ್ರಸಾರ ಸಾರ್ವಜನಿಕ ಸಂಪರ್ಕ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಸಾಕ್ಷರತಾ ಅಬ್ದುಲ್ ನಬಿ ಅಭಿಪ್ರಾಯಪಟ್ಟರು ಇಬ್ರಾಹಿಂ ಮಂಜೀಲ್ ನಲ್ಲಿ  99ನೇ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ವಾಜಪೇಯಿ ಅವರು ಆರ್ ಎಸ್ ಎಸ್ ಭಾರತೀಯ ಜನತಾ ಪಕ್ಷ ಸಂಘಟನೆ ಕಾರ್ಯ ಕರ್ತರ ವಿಷಯದಲ್ಲಿ ಅವರು ಆಡಂಬರ ತೋರಲಿಲ್ಲ ಶತ್ರುತ್ವ ಕಟ್ಟಿಕೊಳ್ಳದೆ ನಂಬಿದ ಸಿದ್ಧಾಂತ ವಹಿಸಿದ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದರು ಆರ್ ಎಸ್ ಎಸ್ ನ ಹಸ್ತತ್ವದ ಉದ್ದೇಶ ಗಳನ್ನು ಸಾರ್ಥಕ ಗೊಳಿಸಿ  ಬಿಜೆಪಿ  ಸರ್ಕಾ ರದ ಮೊದಲ ಪ್ರಧಾನಿಯಾಗಿ ಇತಿಹಾಸ ಬರೆದರು ಭಾರತ ಅಭಿವೃದ್ಧಿಗೆ ಶ್ರಮಿಸಿದರು ಸ್ವತಹ ಕವಿಯಾಗಿ ಪತ್ರಕರ್ತರಾಗಿ ಸಾಟಿ ಇಲ್ಲದ ಬೃಹತ್ ರಾಜಕೀಯ ಸಂಘಟನೆಗೆ ಬೆಳೆಸಿದರು ವಾಜಪೇಯಿ ಅವರು ದೇಶದ ಸಂತ ಅಜಾತ ಶತ್ರುಗಳಾಗಿದ್ದರು ಎಂದು ಅಬ್ದುಲ್ ನಬಿ ಹೇಳಿದರು . ಸಾಮಾಜಿಕ ಪ್ರಮುಖ ಕಾರ್ಯಕರ್ತರಾದ ಹಾಜಿ ಹಂಡಿ ಹುಸೇನ್ ಬಾಷಾ, ಮೊಹಮ್ಮದ್ ನೌಶಾದ್ ಅಲಿ, ಹಂಡಿ ಹಾಶಿಮ್, ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ, ಎ ಮೊಹಮ್ಮದ್ ರಫಿ, ಖಾಲಿ ಚೀಲ ಹಾಜಿ ಹುಸೇನ್ ಸಾಬ್, ಹಾಜಿ ಅಬ್ದುಲ್ ಹಮೀದ್ ಫಾರೂಕಿ, ಹಂಡಿ ಹುಸೇನ್ ಸಾಬ್, ಬಿಕೆ ಅಲ್ಲಾಭಕ್ಷಿ,ಜೆ ನಾಗೇಂದ್ರ ಗೌಡ ಇದ್ದರು.


ಸುದ್ದಿ ಓದಿ