ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜನ್ಮದಿನ:
ನವದೆಹಲಿ, ಸೆ 26 : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಶುಭ ಕೋರಿದ್ದಾರೆ. “ಮನಮೋಹನ್ ಸಿಂಗ್ ಕಾರ್ಯವೈಖರಿಯನ್ನು ಕಂಡಿರುವ ದೇಶವು ಪ್ರಧಾನ ಮಂತ್ರಿಯ ಅನುಪಸ್ಥಿತಿಯನ್ನು ಭಾರತ ಭಾವಿಸುತ್ತಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.“ಅವರ ಪ್ರಾಮಾಣಿಕತೆ, ಸಭ್ಯತೆ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಸ್ಫೂರ್ತಿಯ ಮೂಲವಾಗಿದೆ. ಅವರಿಗೆ ಜನ್ಮದಿನದ ಶುಭಾಶಯಗಳು ಮತ್ತು ಮುಂದಿನ ವರ್ಷಗಳು ಸುಂದರವಾಗಿರಲಿ” ಎಂದು ಆಶಿಸಿದ್ದಾರೆ.