ಅಟಲ್ ಸುರಂಗ : ಮಾಜಿ ಪ್ರಧಾನಿ ನೀಡಿದ್ದ ಭರವಸೆ ಈಡೇರಿದೆ-ಮೋದಿ
ಶಿಮ್ಲಾ, ಅಕ್ಟೋಬರ್ 03 :ಲಾಹೌಲ್ ಕಣಿವೆಯ ಜನತೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೀಡಿದ್ದ ಭರವಸೆ ಈಡೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಜನರಿಗೆ ಹೊಸದಾಗಿ ನಿರ್ಮಿಸಲಾದ ಅಟಲ್ ರೋಹ್ಟಾಂಗ್ ಸುರಂಗವನ್ನು ಶನಿವಾರ ಲೋಕಾರ್ಪಣೆಗೊಳಿಸಿದ ನಂತರ ರೋಹ್ಟಾಂಗ್ ಸುರಂಗದ ಉತ್ತರ ಪೋರ್ಟಲ್ ಮತ್ತು ಸಿಸು ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಟಲ್ ಟನಲ್ ಮಾಜಿ ಪ್ರಧಾನಿ ಭರವಸೆ ನೀಡಿದ್ದ ಅವರ ಸರ್ಕಾರದ ಕೊಡುಗೆಯಾಗಿದೆ ಎಂದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಪಕ್ಷದ ಕಾರ್ಯಕರ್ತರಾಗಿದ್ದಾಗ, ಈ ಪ್ರದೇಶದಲ್ಲಿ ಹಲವಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು ಮತ್ತು ಜನರು ಕಠಿಣ ಹಾಗೂ ಒರಟಾದ ಭೂಪ್ರದೇಶದಲ್ಲಿ ಹೇಗೆ ವಾಸಿಸುತ್ತಿದ್ದಾರೆಂದು ಕಳವಳಿಸಿದ್ದರು ಎಂದರು. ರಾಜ್ಯ ಸರ್ಕಾರದಲ್ಲಿ ನಿರ್ವಾಹಕರಾಗಿದ್ದ ಠಾಕೂರ್ ಸೇನ್ ನೇಗಿ ಸೇರಿದಂತೆ ಹಲವಾರು ಮಂದಿ ಲೌಹಾಲ್ ಕಣಿವೆಯ ಬುಡಕಟ್ಟು ಜನರ ಸಂಕಷ್ಟದ ಬಗ್ಗೆ ತಮ್ಮ ಗಮನಕ್ಕೆ ತಂದಿದ್ದಾಗಿಯೂ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡರು.