ಕಾಗವಾಡ

ಮಾಜಿ ಸಚಿವ ಶ್ರೀಮಂತ ಪಾಟೀಲ ಹುಟ್ಟು ಹಬ್ಬ; ದಿ. 31 ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಮಾಜಿ ಸಚಿವ ಶ್ರೀಮಂತ ಪಾಟೀಲ ಹುಟ್ಟು ಹಬ್ಬ; ದಿ. 31 ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ


ಕಾಗವಾಡ 29: ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ಹುಟ್ಟುಹಬ್ಬದ ನಿಮಿತ್ತ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಕಳೆದ 20 ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತ ಬರಲಾಗುತ್ತಿದೆ. ಈ ವರ್ಷವೂ ಡಿ. 31 ರಂದು ಬೆಳಗ್ಗೆಯಿಂದ ಸಂಜೆ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಇದರ ಲಾಭ ಪಡೆದುಕೊಳ್ಳಬೇಕೆಂದು ಆರೋಗ್ಯ ತಪಾಸಣೆ ಶಿಬಿರದ ವ್ಯವಸ್ಥಾಪಕ ಸಚೀನ ದೇಸಾಯಿ ತಿಳಿಸಿದ್ದಾರೆ. 

ಅವರು, ಬುಧವಾರ ದಿ. 28 ರಂದು ಕಾರ್ಖಾನೆಯ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಈ ಭವ್ಯ ಶಿಬಿರವನ್ನು ಮಿರಜ್‌ನ ಹೆಸರಾಂತ ಸೇವಾಸದನ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮತ್ತು ನಂದಾದೀಪ ನೇತ್ರಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಶಿಬಿರ ನಡೆಯಲಿದೆ. ಅಥಣಿ ಮತ್ತು ಸಾಂಗಲಿ ನಗರದ ಹೆಸರಾಂತ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಮಹಾ ರಕ್ತದಾನ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದ್ದಾರೆ. 

ಶಿಬಿರದಲ್ಲಿ ಅತ್ಯಾಧುನಿಕ ಯಂತ್ರಗಳ ಮೂಲಕ ಕಣ್ಣಿನ ತಪಾಸಣೆ, ಮೋತಿ ಬಿಂದು ಹಾಗೂ ಇನ್ನಿತರ ಕಾಯಿಲೆಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೆರವೇರಲಿದೆ. ಹೃದಯ ಸಂಬಂಧಿತ ಇಸಿಜಿ, ಎಂಜಿಯೋಗ್ರಫಿ, ಎಂಜೋಕ್ಲಾಸ್ಟಿಕ್, ಬೈಪಾಸ್ ಸರ್ಜರಿ ಹಾಗೂ ಸಣ್ಣ ಮಕ್ಕಳ ಶಸ್ತ್ರಚಿಕಿತ್ಸೆ, ಕಿವಿ, ಮೂಗು, ಗಂಟಲು ಮತ್ತು ರೇಡಿಯೋಲಜಿ ಶಸ್ತ್ರಚಿಕಿತ್ಸೆ, ಮಧುಮೇಹ ತಪಾಸಣೆ ಹಾಗೂ ಉಪಚಾರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9902230026, 7625096452 ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ. ಈ ವೇಳೆ ಉಚಿತ ಆರೋಗ್ಯ ತಪಾಸನೆ ಶಿಬಿರದ ಉಸ್ತುವಾರಿಗಳಾದ ಅಬ್ದುಲ ಗಡ್ಡೆಕರ, ಅಧಿಕಾರಿ ಸಂಜಯ ಕಾಯಪೂರೆ ಉಪಸ್ಥಿತರಿದ್ದರು. 


ಸುದ್ದಿ ಓದಿ