ಶಿಗ್ಗಾವ್

ಜೆಡಿಎಸ್‌ನ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ ಬೆಳೆ ಹಾನಿ ಸಮೀಕ್ಷೆ

ಜೆಡಿಎಸ್‌ನ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ ಬೆಳೆ ಹಾನಿ ಸಮೀಕ್ಷೆ

ಶಿಗ್ಗಾವಿ 23: ಹಾವೇರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉತ್ಸವ ಮೂರ್ತಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸರಕಾರದ ಆದೇಶ ಬರುವವರೆಗೂ ರೈತರ ಬೆಳೆ ಪರಿಹಾರ ವಿತರಣೆ ಮಾಡದೇ ಡಿಸಿಯವರ ಖಾತೆಯಲ್ಲಿ ಜಮೆ ಮಾಡಕೊಂಡು ಕುಳಿತಿದ್ದಾರೆ ಈಗಾಗಿ ಕಾಂಗ್ರೇಸ್ ಸರಕಾರ ರೈತರ ಹಿತ ಕಾಯುವ ಸರಕಾರವಲ್ಲ ಎಂದು ಜೆಡಿಎಸ್‌ನ ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ ಕಿಡಿ ಕಾರಿದರು. 

ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಆದೇಶದಂತೆ ಶಿಗ್ಗಾವಿಯ ಧರ್ಮಣ್ಣ ಯಲಿಗಾರ ಹಾಗೂ ಅಣ್ಣಪ್ಪ ನವಲಗುಂದ ಅವರ ಜಮೀನಿನಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ದಿನಗಳಲ್ಲಿ ನೀರನ ಸಮಸ್ಯೆ ಉಲ್ಭಣವಾಗುವ ಎಲ್ಲ ಲಕ್ಷಣಗಳಿವೆಲ್ಲೀ ಸರಕಾರ ರೈತರಿಗೆ ಸರಿಯಾಗಿ ಈಗಲೇ ವಿದ್ಯುತ್ ನೀಡುತ್ತಿಲ್ಲ, ಎನ್‌ಆರ್‌ಇಜಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು ಕಳೆದ ಆರು ತಿಂಗಳಿಂದ ಒಂದೇ ಒಂದು ಅಭಿವೃದ್ದಿ ಕಾರ್ಯಗಳಿಗೆ ಭೂಮಿ ಪೂಜೆ ಮಾಡಿಲ್ಲ, ಗುಂಡಿಗಳ ಮುಚ್ಚಲು ಸರಕಾರದಲ್ಲಿ ಹಣವಿಲ್ಲ, ಮೇವು ಸಂಗ್ರಹಣ ಮಾಡುವ ಕಾರ್ಯವಂತೂ ಮೊದಲೇ ಆಗಿಲ್ಲ, ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದ್ದರೂ ಬೆಳೆ ಹಾನಿ ಪರಿಹಾರ ಮಾತ್ರ ವಿತರಣೆ ಮಾಡುತ್ತಿಲ್ಲ, ಸರಕಾರ ಡಿಸಿಯವರಿಗೆ ಮಾರ್ಗದರ್ಶನವನ್ನೇ ಮಾಡಿಲ್ಲ, ರೈತರಿಗೆ ಕೊಡುವ ಐದು ತಾಸಿನ ವಿದ್ಯುತ್ ಅನ್ನಾದರೂ ಸರಿಯಾಗಿ ಕೊಡಿ, ಅದರಲ್ಲೂ ಕಡಿತ ಮಾಡಿ ರೈತರಿಗೆ ತೊಂದರೆ ಕೊಡುವುದು ಎಷ್ಟು ಸರಿ ?  

ಅವೈಜ್ಞಾನಿಕ ಗ್ಯಾರಂಟಿಗಳು : ಕಾಂಗ್ರೇಸ್ ಸರಕಾರ ಅವೈಜ್ಞಾನಿಕ ಗ್ಯಾರಂಟಿಗಳನ್ನು ಮಾಡಿ ಗ್ಯಾರಂಟಿಗಳ ಅನುಷ್ಠಾನಕ್ಕೆ ಹರಸಾಹಸ ಪಟ್ಟು ಉಳಿದ ಅಭಿವೃದ್ದಿ ಕಾರ್ಯಗಳನ್ನು ಕುಂಠಿತ ಮಾಡಿದೆ, ಪತ್ರಿಕೆಗಳಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಬಿಟ್ಟಿ ಜಾಹಿರಾತು ಪ್ರಚಾರ ಪಡೆಯುವ ಕಾಂಗ್ರೇಸ್‌ನವರು ಯಾವ ಗ್ಯಾರಂಟಿ ಸರಿಯಾಗಿ ಜನರಿಗೆ ತಲುಪಿದೆ ಎಂಬುದನ್ನ ಮೊದಲು ಪರೀಶೀಲನೆ ಮಾಡಲಿ, ಈ ಕಾಂಗ್ರೇಸ್ ಸರಕಾರ ಬಂದರೆ ಬರಿ ಬರಗಾಲವೇ ಆಗುತ್ತದೆ ಕುಮಾರಸ್ವಾಮಿಯವರು ಸಿಎಂ ಇದ್ದಾಗ ಮಳೆ, ಬೆಳೆ ಸರಿಯಾಗಿ ಆಗಿ ರೈತರು, ರಾಜ್ಯದ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು, ಕೇವಲ ಗ್ಯಾರಂಟಿಗಳ ನೆಪದಲ್ಲಿ ರಾಜ್ಯದ ಅಭಿವೃದ್ದಿ ಮರೆತಿದ್ದಾರೆ, ಈ ಗ್ಯಾರಂಟಿಗಳು ರಾಜ್ಯವನ್ನು ದಿವಾಳಿ ಮಾಡುವ ಗ್ಯಾರಂಟಿಗಳಾಗಿವೆ ಎಂದು ಜರಿದರು. 

200 ಯೂನಿಟ್ ವಿದ್ಯುತ್ ಪ್ರಿ ಎಂದು ಹೇಳಿ ಈಗ ಬಿಲ್ ಕಟ್ಟುವಂತೆ ಮಾಡಿದ್ದಾರೆ, ವಿದ್ಯಾರ್ಥಿಗಳ ಸ್ಕಾಲರಿ​‍್ಸಫ್‌ಗೆ ಸರಕಾರದಲ್ಲಿ ಈಗ ಹಣವಿಲ್ಲ, 2 ಲಕ್ಷ 48 ಸಾವಿರ ಹೆಕ್ಟೇರ್ ಪ್ರದೇಶ ಬೆಳೆಹಾನಿಯಾಗಿದೆ, 253 ಕೋಟಿಗೂ ಹೆಚ್ಚು ಬೆಳೆ ನಷ್ಟವಾಗಿದೆ ಆದರೆ ಜಿಲ್ಲೆಗೆ 12-14 ಕೋಟಿ ಹಣ ಬಿಡುಗಡೆ ಮಾಡುತ್ತೀರಿ ಇದು ರೈತರ ಬಗ್ಗೆ ಇರುವ ಖಾಳಜಿಯೇ ? ಎಂದು ಪ್ರಶ್ನಿಸಿದರು, ಈ ಪರಿಹಾರ ವೈಜ್ಞಾನಿಕವಾಗಿ ನೀಡಲಾಗಿದೆಯೇ ಎಂಬುದನ್ನ ಸರಕಾರ ಸ್ಪಷ್ಟಪಡಿಸಬೇಕು ಎಂದರು. 

ಎನ್‌ಡಿಆರ್‌ಎಫ್‌ನಲ್ಲಿ ಕೇಂದ್ರ ಸರಕಾರದ ಹಣ ಬಂದಿದೆ, ರಾಜ್ಯ ಸರಕಾರದ ಪರಿಹಾರ ಹಣ ಎಲ್ಲಿ ? ಗ್ರಾಮ ವಾಸ್ತವ್ಯ ಮಾಡಿದ್ದು ಗ್ರಾಮವಾಸ್ತವ್ಯದಲ್ಲಿ ಸಾರ್ವಜನಿಕರ ಸ್ವೀಕೃತ ಅರ್ಜಿಗಳನ್ನು ಸಂಪೂರ್ಣವಾಗಿ ನಿಷ್ಕಾಳಜಿ ಮಾಡಲಾಗಿದೆ ಎಂದು ತೀರ್ವ ವಾಗ್ದಾಳಿ ನಡೆಸಿದರು. 

ಮಾಜಿ ಶಾಸಕ ವೀರಭದ್ರ​‍್ಪ ಹಾಲಹರವಿ, ಹುಬ್ಬಳ್ಳಿ ಧಾರವಾಡ ಮಹಾನಗರ ಜೆಡಿಎಸ್ ಜಿಲ್ಲಾದ್ಯಕ್ಷ ಗುರುರಾಜ ಹುಣಸಿಮರದ, ರಾಣೆಬೆನ್ನೂರ ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣರ, ತಾಲೂಕಾದ್ಯಕ್ಷ ಈರಣ್ಣ ನವಲಗುಂದ, ಜಿಲ್ಲಾ ಉಪಾದ್ಯಕ್ಷ ಜೆಎಪಿ ಪಠಾಣ್, ಉಪಾದ್ಯಕ್ಷ ಬಿಸೆಟ್ಟಪ್ಪ ಗುದ್ಲಿಶೆಟ್ಟರ್, ಶಹರ ಅದ್ಯಕ್ಷ ಸಂಜೀವ ಮಣ್ಣಣ್ಣವರ, ಕಾರ್ಯದರ್ಶಿ ಸದಾನಂದ ಯಲಿಗಾರ, ನಾಗಪ್ಪ ಚಹ್ವಾಣ, ಮಾಂತೇಶ ಬೇವಿನಹಿಂಡಿ, ರಾಜು ಮಾಳವದೆ, ಗಂಗಾಧರ ಯಲಿಗಾರ, ಸಿಕಂದರ ಅತ್ತಾರ ಸೇರಿದಂತೆ ರೈತರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು. 

ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದಿಂದ 11,000 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಗ್ಯಾರಂಟಿಗಳ ಅನುಷ್ಟಾನಕ್ಕೆ ಪಡೆದ ಮೇಲೆ ಸ್ಕಾಲರ್‌ಶಿಫ್ ಎಲ್ಲಿಂದ ಕೊಡುತ್ತಾರೆ, ಈ ಮೊದಲು ಬಿಜೆಪಿ ಸರಕಾರವಿದ್ದಾಗ ಸಿದ್ದರಾಮಯ್ಯನವರು ಬಿಜೆಪಿ ಸರಕಾರವನನ್ನೀ ಕುರಿತು ಪ್ರಶ್ನಿಸಿದ್ದರು ಆದರೆ ಈಗ ಸಿದ್ದರಾಮಯ್ಯನವರನ್ನ ಯಾರು ಪ್ರಶ್ನಿಸಬೇಕು. 

ಅಲ್ಕೋಡ್ ಹನುಮಂತಪ್ಪ 

ಮಾಜಿ ಸಚಿವ 


ಸುದ್ದಿ ಓದಿ