ಅಸ್ಸಾಂ ಮಾಜಿ ಮುಖ್ಯಮಂತ್ರಿ ಸೈದಾ ಅನ್ವಾರ ತೈಮೂರ್ ನಿಧನ
ಗೌಹಾಟಿ , ಸೆಪ್ಟೆಂಬರ್ 29: ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಸೈದಾ ಅನ್ವಾರ ತೈಮೂರ್ ಆಸ್ಟ್ರೇಲಿಯಾದಲ್ಲಿ ತಡರಾತ್ರಿ ಹೃದಯ ಸ್ತಂಭನದಿಂದಾಗಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಅವರಿಗೆ 83 ವರ್ಷ ವಯಸ್ಸಾಗಿತ್ತು .ತೈಮೂರ್ ರಾಜ್ಯದ ಏಕೈಕ ಮುಸ್ಲಿಂ ಸಮುದಾಯದ ಮುಖ್ಯಮಂತ್ರಿಯಾಗಿದ್ದರು. ಅವರು ಕಳೆದ ಕೆಲವು ವರ್ಷಗಳಿಂದ ತಮ್ಮ ಮಗನೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರು.
ತೈಮೂರ್ 1980 ರ ಡಿಸೆಂಬರ್ 6 ರಿಂದ 1981 ರ ಜೂನ್ 30 ರವರೆಗೆ ಕಾಂಗ್ರೆಸ್ ಸರ್ಕಾರದ ಸಾರಥ್ಯಟ ವಹಿಸಿದ್ದರು. 1972, 1978, 1983 ಮತ್ತು 1991 ರಲ್ಲಿ ನಾಲ್ಕು ಬಾರಿ ರಾಜ್ಯ ವಿಧಾನಸಭೆಗೆ ಚುನಾಯಿತರಾಗಿದ್ದ ತೈಮೂರ್ 1988 ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.
ತೈಮೂರ್ ಅವರು ಕಾಂಗ್ರೆಸ್ ತೊರೆದು 2011 ರಲ್ಲಿ ಎಐಡಿಯು ಎಫ್ ಸೇರಿದ್ದರು ರಾಜಕೀಯಕ್ಕೆ ಬರುವ ಮೊದಲು ರಲ್ಲಿ ಜೋರ್ಹತ್ನ ಡೆಬಿಚರನ್ ಬರುವಾ ಬಾಲಕಿಯರ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿದ್ದರು.