ಬಳ್ಳಾರಿ

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ,

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ,

ಬಳ್ಳಾರಿ 21: ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕ ವತಿಯಿಂದ  ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬಹು ಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಮುನಿಸ್ವಾಮಿ ರವರು ಮಾತನಾಡುತ್ತಾ ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿ, ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಿಲಯ ಪಾಲಕರಿಂದ ಒಂದಲ್ಲ ಒಂದು ರೀತಿಯಲ್ಲಿ ಹಲ್ಲೆ ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ದಿನಾಂಕ 16.09.2023 ರಂದು ಬಳ್ಳಾರಿ ನಗರದ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ 9ನೇ ತರಗತಿ ಓದುವಂತಹ ವಿದ್ಯಾರ್ಥಿ ಧಿವಾಕರ ನ ಮೇಲೆ ಆಮಾನುಷ್ಯವಾಗಿ ವಿದ್ಯಾರ್ಥಿ ಏನೋ ತಪ್ಪು ಮಾಡಿದ್ದಾನೆ ಎನ್ನುವ ನೆಪ ಮಾಡಿಕೊಂಡು ಕಾವಲುಗಾರ ಮನೋಹರ ಎನ್ನುವವನು ಮೈಮೇಲೆ ಬಾಸುಂಡೆಗಳು ಬರುವಂತೆ ಬಡಿದು ‘ಎಡಗೈನ ಮೂಳೆ ಮುರಿಯುವಂತೆ ಬಡೆದಿದ್ದಾನೆ.  

ಈ ಘಟನೆಗೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ವಾರ್ಡನ್ ಮತ್ತು ವಾಚ್‌ಮ್ಯಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಮತ್ತು ಈ ಘಟನೆಯಲ್ಲಿ ಭಾಗಿಯಾದ ಈ ಇಬ್ಬರನ್ನು ಇಲಾಖೆಯು ಅಮಾನತ್ತು ಮಾಡಿದೆ. ನಂತರ ಇನ್ನು ಉಳಿದ ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಘಟನೆ ಸಂಭವಿಸದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ಅಲ್ಲದೆ ಕೆಲವೊಂದು ಸಮಸ್ಯೆಗಳು ಇನ್ನು ಹಾಗೆಯೇ ಇವೆ, ಆದುದರಿಂದ  ಬೇರೆ ವಸತಿ ನಿಲಯಗಳಲ್ಲಿ ಯಾವುದೇ ಒಬ್ಬ ನಿಲಯ ಪಾಲಕರು ಸಹ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ ಮತ್ತು ವಾಚ್ ಮ್ಯಾನ್ (ಕಾವುಲುಗಾರ) ಸಹ ಇರುವುದಿಲ್ಲ ಇವರು ಇಲ್ಲದೆ ಹೋಗಿರುವುದರಿಂದ ನಿಲಯಗಳಲ್ಲಿ ಏನು ನಡೆಯುತ್ತಿದೆ ಎಂಬುದು ಇವರಿಗೆ ಗೊತ್ತಾಗುವುದಿಲ್ಲ. ಜಿಲ್ಲೆಯಲ್ಲಿ ಪ್ರಮುಖವಾಗಿ ಮೊರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿಯೂ ಸಹ ಪ್ರಾಂಶುಪಾಲರು ಮತ್ತು ವಾಚ್ ಮ್ಯಾನ್, (ಕಾವಲುಗಾರ) ಇರುವುದಿಲ್ಲ. ಆದುದರಿಂದ ಈ ಎಲ್ಲಾ ಘಟನೆಗಳು ಸಂಭವಿಸಲು ಪ್ರಮುಖವಾಗಿ  ಡಿಎಸ್‌ಡಬ್ಲ್ಯೂ ಮತ್ತು ಟಿಎಸ್‌ಡಬ್ಲ್ಯೂ ರವರು ಅಧಿಕಾರಿಗಳು ಕಾರಣಕರ್ತರಾಗಿರುತ್ತಾರೆ, ಆದದರಿಂದ ನಿಲಯಗಳಲ್ಲಿ ಯಾವುದೇ ಘಟನೆಗಳು ನಡೆದರೂ ಕೂಡ ಅದಕ್ಕೆ ಡಿ ಎಸ್ ಡಬ್ಲ್ಯೂ ಮತ್ತು ಟಿ ಎಸ್ ಡಬ್ಲ್ಯೂ ಅವರನ್ನೇ ನೆರೆ ಹೊಣೆಗಾರರನ್ನಾಗಿ ಮಾಡಬೇಕೆಂದು ಬಹುಜನ ಸಮಾಜ ಪಕ್ಷವು ಒತ್ತಾಯಿಸುತ್ತದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಚ್ ಮುನಿಸ್ವಾಮಿ, ಉಮಾಪತಿ, ಮಹಮದ್ ಅಲಿ, ಕೆ ಬಾಬು ಮಹಾನಂದಿ ಕೊಟ್ಟಂ, ಚಿದಾನಂದಪ್ಪ, ತಿಪ್ಪೇಸ್ವಾಮಿ, ಸುಧೀರ್ ಕುಮಾರ್ ಸಂಘದ ಸದಸ್ಯರು ವಿವಿಧ ಪದಾಧಿಕಾರಿಗಳು ಆಗಮಿಸಿದ್ದರು. 


ಸುದ್ದಿ ಓದಿ