ಬಳ್ಳಾರಿ

ಗ್ರಾಮ ಆಡಳಿತಾಧಿಕಾರಿಗೆ ನ್ಯಾಯ ಭದ್ರತೆ ಕಲ್ಪಿಸಲು ಒತ್ತಾಯ

ಗ್ರಾಮ ಆಡಳಿತಾಧಿಕಾರಿಗೆ ನ್ಯಾಯ ಭದ್ರತೆ ಕಲ್ಪಿಸಲು ಒತ್ತಾಯ

ಬಳ್ಳಾರಿ ಫೆ 20: ತೊಲಮಾಮಿಡಿ ಗ್ರಾಮ ಅಡಳಿತ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರಿಗೆ ಬೆದರಿಕೆ ಹಾಕಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುವನ್ನು ಖಂಡಿಸಿ ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು. 

ತೊಲಮಾಮಿಡಿ ಗ್ರಾಮ ಅಡಳಿತ ಅಧಿಕಾರಿ ಗಣೇಶ್‌ರವರು ತಾಲೂಕು ಹೆಚ್ಚುವರಿ ಪ್ರಬಾರೆಯಾಗಿ ಶಂಕರಬಂಡೆ ಮತ್ತು ಜೋಳದರಾಶಿ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.  

ಈ ಸಂದರ್ಭದಲ್ಲಿ ಜಮೀನು ಇಲ್ಲದಿರುವ ದೃಢೀಕರಣ ಪತ್ರ ಕೋರಿ ತೂಲಮಾಮಿಡಿ ಗ್ರಾಮದ ರಾಜಕುಮಾರ ಹೊಸಪೇಟೆ ಮಾರೆಪ್ಪ, ಎಂಬುವವರು  ತಮ್ಮ ಸಹೋದರಿಯರಾದ ರೇಣುಕ ಗೋವಿಂದರಾಜ, ಹಾಗೂ ಗೀತಾಂಜಲಿ ಪಿ.ಎಸ್‌.ನಾಗರಾಜ ಇವರುಗಳಿಗೆ ಜಮೀನು ಇಲ್ಲದಿರುವ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ವರದಿಗಾಗಿ ಬಂದಾಗ ಇರುವ ವಾಸ್ತವ ಅಂಶಗಳಿಗೆ ಗ್ರಾಮ ಅಡಳಿತಾಧಿಕಾರಿ ವರದಿಯೊಂದಿಗೆ 3 ಬಾರಿ ಅರ್ಜಿಗಳನ್ನು ಸಲ್ಲಿಸಿದ್ದು ಸದರಿ ಅರ್ಜಿದಾರರು ಗ್ರಾಮದಲ್ಲಿ ವಾಸವಿಲ್ಲವೆಂದು ಹಾಗೂ ಚುನಾವಣಾ ಗುರುತಿನ ಚೀಟಿ ಹೊಂದಿಲ್ಲವೆಂದು, ಅರ್ಜಿದಾರರಿಗೆ ಹಾಗೂ ಅದರ ಕುಟುಂಬದವರಿಗೆ ತೂಲಮಾಮಡಿ ಗ್ರಾಮ ವ್ಯಾಪ್ತಿಯಲ್ಲಿ ಜಮೀನು ಹೊಂದಿಲ್ಲವೆಂದು ವರದಿಯನ್ನು ಸಲ್ಲಿಸಿರುತ್ತಾರೆ. ((01)ಗಣೇಶ್ ಇವರ ವಿರುದ್ಧ ದಾಖಲಿಸಿದ ಎಫ್ ಐ ಆರ್  ಸಂಖ್ಯೆ 0022/22-23 ದಿನಾಂಕ :18/02/2023 ರಂದು ಹಾಗೂ ಉಲ್ಲೇಖಿತ:(02)ರ  ಗಣೇಶ್ ರವರು ದಾಖಲಿಸಿದ ಎಫ್‌ಐಆರ್ ಸಂಖ್ಯೆ :0022/22-23 ದಿನಾಂಕ :18/02/2023 ಆಗಿದೆ.)  

ಗ್ರಾಮ ಆಡಳಿತ ಅಧಿಕಾರಿ ಗಣೇಶ್ ಅವರ ಮೇಲೆ ಸಲ್ಲಿಸಲಾದ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ತಮ್ಮ ಮೇಲಿನ ದುರುದ್ದೇಶದಿಂದ ಹಾಗೂ ಯಾವುದೋ ಅಪೇಕ್ಷೆಯಿಂದ ದೂರು ಸಲ್ಲಿಸಿರುವುದರ ವಿರುದ್ಧ ಪ್ರತಿ ದೂರನ್ನು ಬಳ್ಳಾರಿ ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಈ ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯ ಸಮ್ಮತವಾದ ತನಿಖೆ ಕೈಗೊಂಡು ನೌಕರರ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದನ್ನು ವಜಗೊಳಿಸಿ, ದೂರುದಾರರ ವಿರುದ್ಧ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.  

ಪ್ರತಿದೂರಿನ ಅನ್ವಯ ಗಣೇಶ್ ರವರನ್ನು ಗ್ರಾಮದ ಆಡಳಿತ ಅಧಿಕಾರಿಗಳು ಇವರಿಗೆ ಸೂಕ್ತವಾದ ನ್ಯಾಯ ಭದ್ರತೆ ಕಲ್ಪಿಸಿಕೊಡಲು  ಮತ್ತು ಮುಂದುವರೆದು ಜಿಲ್ಲೆಯ ಎಲ್ಲಾ ಸಮಸ್ತ ಕಂದಾಯ ಇಲಾಖೆಯ ನೌಕರರಿಗೆ ಸೂಕ್ತ ರಕ್ಷಣೆಯನ್ನು ನೀಡಲು ಒತ್ತಾಯಿಸುತ್ತೇವೆ. ಹಾಗೂ ನೌಕರರ ಮೇಲೆ ಪದೇ ಪದೇ ನಡೆಯುವ ಹಲ್ಲೆ, ದೌರ್ಜನ್ಯ ಹಾಗೂ ಇತರೆ ಘಟನೆಗಳನ್ನು ನಡೆಯದಂತೆ ಮುಂಜಾಗ್ರತವಾಗಿ ಮಾಡುವವರ ವಿರುದ್ಧ ಕಠಿಣ ಕಾನೂನು ನಿಯಮಗಳನ್ನು ರೂಪಿಸಿ ಮತ್ತು ಅಲ್ಲೇ ಮಾಡುವವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿ. ಕೆ ರಾಮಕೃಷ್ಣ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿಗಳು ಮಾತನಾಡಿದರು.  

ಜಿಲ್ಲಾ ಶಾಖೆಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಂ ಶಿವಾಜಿ ರಾವ್, ಜಿ ಕೆ ರಾಮಕೃಷ್ಣ ಜಿಲ್ಲಾ ಕಾರ್ಯದರ್ಶಿಗಳು,ಎಸ್‌. ಎಂ. ಭದ್ರಯ್ಯ, ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಬಾಗದ ನೇಕರಾದ ಮಾರ​‍್ಪ, ಸುನಿಲ್ ಕುಮಾರ್, ಸಂಘದ ಪದಾಧಿಕಾರಿಗಳು ಸದಸ್ಯರು ವಿವಿಧ ನೌಕರರು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ