ಮಾಜಿ ಅರೇ ಸೇನಾ ಸೈನಿಕರಿಗೆ ನಿವೇಶನ ಒದಗಿಸುವಂತೆ ಒತ್ತಾಯ
ಲೋಕದರ್ಶನ ವರದಿ
ಕುಷ್ಟಗಿ 02: ತಾಲೂಕಿನಲ್ಲಿ ಸುಮಾರು ಜನ ಮಾಜಿ ಅರೇ ಸೇನಾ ಸೈನಿಕರು ಇದ್ದು ನಮ್ಮ ಕುಂದುಕೊರತೆಗಳ ಸಭೆಯನ್ನು ಮತ್ತು ಕಲ್ಯಾಣ ಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಹಾಗೂ ಸೈನಿಕರ ಸವಿನೆನಪಿಗಾಗಿ ಭವನ ನಿರ್ಮಾಣ ಮಾಡಲು ಪುರಸಭೆಯವರು ನಿವೇಶನ ನೀಡಬೇಕೆಂದು ಮಾಜಿ ಅರೇ ಸೇನಾ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಶರಣಯ್ಯ ಹಿರೇಮಠ ಒತ್ತಾಯಿಸಿದ್ದಾರೆ.
ತಾಲೂಕು ಮಾಜಿ ಅರೇ ಸೇನಾ ಸೈನಿಕರ ಸಂಘದ ಪದಾಧಿಕಾರಿಗಳ ವತಿಯಿಂದ ಭವನ ನಿರ್ಮಾಣ ಮಾಡಲು ಪುರಸಭೆ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನ ಒದಗಿಸುವಂತೆ ಒತ್ತಾಯಿಸಿ ಮಂಗಳವಾರ ಬೆಳಗ್ಗೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ದೇಶ ಕಾಯುವ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಪಣವಿಟ್ಟು ಯುದ್ಧ ಭೂಮಿಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಾರೆ ಅವರ ಏಳಗೆಗೆ ಸರಕಾರ ಉತ್ತಮ ಸ್ಪಂದನೆ ನೀಡುತ್ತಿದೆ ಎಂದು ಸರಕಾರದ ನಡೆಯನ್ನು ಶ್ಲಾಘೀಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಭೀಮನಗೌಡ, ಶಿವಾಜಿ ಹಡಪದ, ಬಸವನಗೌಡ, ಎಂ.ಡಿ ರಫೀ, ಬುಡ್ಡಪ್ಪ ಹೆಚ್, ಶಿವಸಂಗಪ್ಪ ಹಡಪದ, ಬಿ.ಡಿ ಹಿರೇಮನಿ, ಸುರೇಶ, ಸೋಮಶೇರಯ್ಯ, ಹನುಮಂತಪ್ಪ, ಮುನೀರ್, ವಿರೇಶ ವಡ್ಡರ್, ಪಿ.ಗಾಯಕ್ವಾಡ, ಎ.ಬಸವರಾಜ, ರಾಮಪ್ಪ, ಈಶ್ವರಗೌಡ ಸೇರಿದಂತೆ ಇನ್ನಿತರೆ ಮಾಜಿ ಅರೇ ಸೇನಾ ಸೈನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.