ಮೊದಲಿನ ಸಮಯಕ್ಕೆ ಬಸ್ ಬಿಡಲು ಒತ್ತಾಯ
ಮುಂಡಗೋಡ: ಪಟ್ಟಣದಿಂದ ಯರೇಬೈಲ್ ಗ್ರಾಮಕ್ಕೆ 5.15ಕ್ಕೆ ಬಿಡುತ್ತಿದ್ದ ಬಸ್ ಅನ್ನು ಕಳೆದ 2-3 ದಿನಗಳಿಂದ 6 ಗಂಟೆಗೆ ಬಿಡುತ್ತಿರುವುದರಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಮನೆಗೆ ತಲುಪಲು ತಡವಾಗುತ್ತಿದೆ ಮೊದಲಿನಂತೆ 5.15ಕ್ಕೆ ಬಿಡಬೇಕು ಎಂದು ಯರೇಬೈಲ್ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಸ್ ನಿಯಂತ್ರಣಾಧಿಕಾರಿ ಮಹದೇವಪ್ಪ ಮಾದರ ಅವರಿಗೆ ಒತ್ತಾಯಿಸಿದರು.
ನಂತರ ನಿಯಂತ್ರಣಾಧಿಕಾರಿ ಚಾಲಕ ಮತ್ತು ನಿರ್ವಾಹಕರ ಸಮೇತ ಬಸ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು. ಎಎಸ್ಐ ಗೀತಾ ಕಲಘಟಗಿ ಅವರು ನಿಯಂತ್ರಣಾಧಿಕಾರಿ ಮತ್ತು ವಿದ್ಯಾರ್ಥಿಗಳಿಗೆ ಸಮಾಧಾನ ಪಡಿಸಿ ಶಿರಸಿ ಡಿಪೋ ಮ್ಯಾನೇಜರ್ ಪ್ರವೀಣ ಅವರಿಗೆ ಫೋನ್ ಕರೆ ಮಾಡಿಸಿ ಬಸ್ ಅನ್ನು ಮೊದಲಿನಂತೆ 5.15ಕ್ಕೆ ಬಿಡುವಂತೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪೊಲೀಸ್ ಠಾಣೆಯಿಂದ ಮರಳಿದರು.
ಈ ವೇಳೆ ಮಂಜುನಾಥ ಹಿರೇಮಠ, ರಮೇಶ, ಮುಸ್ತಾಕ್, ರಾಜೇಂದ್ರ ಮತ್ತು ವಿದ್ಯಾರ್ಥಿಗಳು ಇದ್ದರು.