ಚಿಕ್ಕೋಡಿ

ರಾಜ್ಯದಲ್ಲಿ ಮೊದಲ ಬಾರಿಗೆ ವಾರ್ಡ ಮಟ್ಟದಲ್ಲಿ ಕೋವಿಡ್ ಲಸಿಕೆಗೆ ಮುಂದಾದ ಪುರಸಭೆ

ರಾಜ್ಯದಲ್ಲಿ ಮೊದಲ ಬಾರಿಗೆ ವಾರ್ಡ ಮಟ್ಟದಲ್ಲಿ ಕೋವಿಡ್ ಲಸಿಕೆಗೆ ಮುಂದಾದ ಪುರಸಭೆ

ಚಿಕ್ಕೋಡಿ 8: ಕೊರೊನಾ ಎರಡನೆ ಅಲೆ ಆರಂಭವಾದ ಹಿನ್ನಲ್ಲೆಯಲ್ಲಿ ಇಡೀ ದೇಶ ತತ್ತರಗೊಂಡಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ವ್ಯಾಕ್ಸಿನ್ ನೀಡಲು ಮುಂದಾಗಿದೆ. ಇದರಿಂದ ಚಿಕ್ಕೋಡಿ ಪುರಸಭೆಯು ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾರ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಮುಂದಾಗಿದೆ.ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಲ್ಲಿ ಜನರು ಹಿಂಜರಗುತ್ತಿರುವುದನ್ನು ಅರಿತು ಚಿಕ್ಕೋಡಿ ಪುರಸಭೆ ಮುಂದಾಳತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ತಾಲೂಕಾ ಆಡಳಿತದ ಸಹಬಾಗ್ಯತ್ವದಲ್ಲಿ ವಾರ್ಡ ಮಟ್ಟದಲ್ಲಿ ಲಸಿಕೆ ಹಾಕುವ ಕಾರ್ಯಕ್ಕೆ ಗುರುವಾರ ವಾರ್ಡ ನಂ-1 ರಲ್ಲಿ ಚಾಲನೆ ನೀಡಿದರು.

ತಾಲೂಕಾ ವೈದ್ಯಾಧಿಕಾರಿ ಡಾ. ವಿಠ್ಠಲ ಶಿಂಧೆ ಮಾತನಾಡಿ, ಕೋವಿಡ್ ಮಹಾಮಾರಿಯ 2ನೇ ಅಲೇ ಹಬ್ಬುತ್ತಿರುವ ಹಿನ್ನಲೆ ಕೊರೊನಾ ಪಾಸಿಟಿವ್ ಕೇಸಗಳು ಜಾಸ್ತಿ ಪತ್ತೆಯಾಗುತ್ತಿವೆ. ಸುಳ್ಳು ವದಂತಿಗಳಿಂದ ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಜನರಿಗೆ ಕೋವಿಡ್‍ನಿಂದ ರಕ್ಷಣೆ ಕೊಡಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಸುಳ್ಳು ವದಂತಿಗಳಿಗೆ ಕಿವಿಗೋಡದೇ ಭಯಪಡದೇ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಮಾತನಾಡಿ, ಚಿಕ್ಕೋಡಿ ಪುರಸಭೆ ವತಿಯಿಂದ ಪ್ರತಿಯೊಂದು ವಾರ್ಡಗಳಿಗೆ ತೆರಳಿ ಕೋವಿಡ್ ವ್ಯಾಕ್ಸಿನ್ ಜನರಿಗೆ ತಲುಪಿಸುವ ಕಾರ್ಯ ಕರ್ನಾಟಕದಲ್ಲಿ ಪ್ರಥಮವಾಗಿ ಚಿಕ್ಕೋಡಿ ಪುರಸಭೆ ಮಾಡುತ್ತಿರುವುದು ಹೆಮ್ಮೆಯ ವಿಷಯ, ಜನರು ಯಾವುದೇ ಉಹಾಪೋಹಗಳಿಗೆ ಕಿವಿಗೋಡದೇ ಎಲ್ಲರೂ ಕೋವಿಡ್ ವ್ಯಾಕ್ಸೀನ್ ತೆಗೆದುಕೋಳ್ಳಿ ಎಂದು ಮನವಿ ಮಾಡಿಕೊಂಡರು.

ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ ಮಾತನಾಡಿ ಪೋಲಿಯೋ ಮಾದರಿಯಲ್ಲಿ ಕೊರೊನಾವನ್ನು ಸಂಪೂರ್ಣವಾಗಿ ಹೊಡೆದೋಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ವ್ಯಾಕ್ಸಿನ್ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅದಮ ಗಣೇಶವಾಡಿ, ಪುರಸಭೆ ಸದಸ್ಯೆ ಅಶ್ವೀನಿ ಮಿರ್ಜೆ, ಸಿದ್ಧಪ್ಪಾ ಡಂಗೇರ, ವಿಶ್ವನಾಥ ಕಾಮಗೌಡ, ಸಂತೋಷ ಟವಳೆ, ಬಾಬು ಮಿರ್ಜೆ, ರವಿ ಅಶ್ವತ್ಥಪೂರ, ವ್ಯೆದ್ಯಾಧಿಕಾರಿ ಡಾ. ಸಂತೋಷ ಕೊನ್ನೂರೆ ಸೇರಿದಂತೆ ಮುಂತಾದವರು ಇದ್ದರು.ನಂತರ ಸ್ಥಳಕ್ಕೆ ತಹಸೀಲ್ದಾರ ಪ್ರವೀಣ ಜ್ಯೆನ್ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ಡಾ, ಸುಂದರ ರೋಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸುದ್ದಿ ಓದಿ