ಹುಲಗೂರಿನಲ್ಲಿ ಜನಪದ ಸಂಗೀತ ಕಾರ್ಯಕ್ರಮ
ಶಿಗ್ಗಾವಿ,28 : ನಮ್ಮ ದೇಶದಲ್ಲಿ ಇನ್ನೂ ಕೆಲವು ಕೆಡೆ ನಮ್ಮ ಕಲೆ ಹಾಗೂ ಸಂಸ್ಕೃತಿ ಜೀವಂತವಾಗಿರಲು ಇಂತಹ ಸಂಗೀತ ಕಾರ್ಯಕ್ರಮಗಳು ಪ್ರಮುಖವಾಗಿವೆ ಅದರಲ್ಲಿ ಗ್ರಾಮೀಣ ಮಟ್ಟದಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಬಸವರಾಜ ನೂಲ್ವಿ ಹೇಳಿದರು.
ತಾಲೂಕಿನ ಹುಲಗೂರ ಗ್ರಾಮದ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ(ರಿ)ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಜನಪದ ಸಂಗೀತ ಕಾರ್ಯಕ್ರಮವನ್ನು ದಿ 20 ರಂದು ಮಂಗಳವಾರ ಸಮಯ ಸಂಜೆ 7 ಗಂಟೆಗೆ ಸ್ಥಳ ಜಮಖಂಡಿ ಓಲೇಮಠದಲ್ಲಿ ಸಪ್ತಸ್ವರ ಗಾಯನ ಕಲಾತಂಡದಿಂದ ಗೌರಮ್ಮ ಮರಡಿ ಅವರ ತಂಡದ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಪುಟ್ಟಣ್ಣ ಹೊನ್ನಣ್ಣವರ ಉದ್ಘಾಟಿಸಿದರು. ಚಂದ್ರು ಅಚೇಬಣದ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಕಲಾವಿದರು ಉಪಸ್ಥಿತರಿದ್ದರು.