ರಾಣೆಬೆನ್ನೂರ

ಜನಪದ ಕಲೆ, ಕಲಾವಿದರು ಭಾರತೀಯ ಸಂಸ್ಕೃತಿಯ ಹರಿಕಾರರು: ಡಾ. ಕುಬೇರ​ಪ್ಪ

ಜನಪದ ಕಲೆ, ಕಲಾವಿದರು ಭಾರತೀಯ ಸಂಸ್ಕೃತಿಯ ಹರಿಕಾರರು: ಡಾ. ಕುಬೇರ​ಪ್ಪ


ರಾಣೇಬೆನ್ನೂರು 18: ಕಲೆ, ಸಾಹಿತ್ಯ, ಜನಪದ ಸಂಗೀತ ಮನುಷ್ಯನ ನಿತ್ಯದ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಬೆಳೆಯಬೇಕಾಗಿದೆ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಇತಿಹಾಸದಲ್ಲಿ ಹಾಸು ಹೊಕ್ಕಾಗಿ ನಮ್ಮ ಬದುಕಿನಲ್ಲಿ ನಮ್ಮ ಪೂರ್ವಜರು ಅಳವಡಿಸಿಕೊಂಡು ಬಂದಿದ್ದಾರೆ. ಜನಪದ ಕಲೆ ಕೇವಲ ಒಂದು ಕಲೆಯಲ್ಲ. ಅದು ಗ್ರಾಮೀಣ ಜನರ ಬದುಕು. ಅಂತಹ ಕಲಾ ಪರಂಪರೆಯ ಮೂಲಕ ನಮ್ಮ ಕಲೆ ಮತ್ತು ಕಲಾವಿದರು ಅಳವಡಿಸಿಕೊಂಡು ಸಾಗುವುದರ ಮೂಲಕ ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಿದ್ದಾರೆ. ಹೀಗಾಗಿ ಭಾರತೀಯರು ಕಲೆ ಮತ್ತು ಕಲಾವಿದರು ದೇಶದ ಸಂಸ್ಕೃತಿಯ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಬಿ ಎ ಇ್ವ ಎಸ್ ಎಸ್ ಕಾಲೇಜು ಆಡಳಿತಾಧಿಕಾರಿ ಡಾ.ಆರ್‌.ಎಂ.ಕುಬೇರ​ಪ್ಪ ಹೇಳಿದರು. 

ಶುಕ್ರವಾರ  ಹಲಗೇರಿ ರಸ್ತೆಯ ಕಾಲೇಜು ಸನದಿ ಸಭಾ ಭವನದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಜಿಲ್ಲಾ ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ 2021-22ನೇ ಸಾಲಿನ ಜಿಲ್ಲಾ ಮಟ್ಟದ ಯುವ ಜನೋತ್ಸವ (ಆಯ್ಕೆ) ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

           ವಿದ್ಯಾರ್ಥಿಗಳು ದೇಶದ ಭವಿಷ್ಯದ ಹರಿಕಾರರು. ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಭವ್ಯ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಜನಪದ ಕಲೆ, ಸಾಹಿತ್ಯ, ಸಂಗೀತ, ಆರಾಧಿಸುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ನಿರೂಪಿಸಿಕೊಂಡಾಗ ಮಾತ್ರ ದೇಶದ ಭವಿಷ್ಯವನ್ನು ಭದ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.  

         ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲಿಯೂ ಸುಪ್ತವಾಗಿ ಅಡಗಿರುತ್ತದೆ. ಅವುಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಬೇಕಾಗುತ್ತದೆ. ಅಂತಹ ಅವಕಾಶವನ್ನು ಸರಕಾರ, ಕ್ರೀಡಾ ಇಲಾಖೆ ಕಲ್ಪಿಸುತ್ತಿದೆ. ಅದರ ಸಾಕಾರಕ್ಕೆ ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳು ಸದಾಕಾಲ ಮುಂದಿವೆ ಎಂದ ಡಾ.ಕುಬೇರ​ಪ್ಪ ವಿದ್ಯಾರ್ಥಿಗಳು ಆರಂಭದಿಂದಲೇ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಸಂಪೂರ್ಣ ಬದುಕನ್ನು ಪರಿಪೂರ್ಣವಾಗಿ ಕಟ್ಟಿಕೊಳ್ಳಲ್ಲು ಸಾಧ್ಯವಾಗುವುದು ಎಂದರು. 

     ಕಾಲೇಜು ಪ್ರಾಚಾರ್ಯ ಡಾ. ಸುರೇಶ್ ಬಣಕಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸೇವಾ ಕ್ರೀಡಾ ಇಲಾಖೆಯ ವ್ಯವಸ್ಥಾಪಕ ಎಂ.ಟಿ.ಜೋಗತಿನ್‌ಕರ್ ಮತ್ತು ಎಂ.ಎಸ್‌.ಜಮಾಅಹ್ಮದ್, ಜಾನಪದ ವಿದ್ವಾಂಸ ಕೆ.ಸಿ.ನಾಗರಜ್ಜಿ, ಕಲಾವಿದ ಗುಡ್ಡರಾಜ ಹಲಗೇರಿ, ಜಾನಪದ ಪರಿಷತ್ತು ತಾಲೂಕಾಧ್ಯಕ್ಷ ಶಿವಕುಮಾರ ಜಾದವ್, ಉಪಪ್ರಾಚಾರ್ಯ ದೇವರಾಜ್ ಹಂಚಿನಮನಿ, ಪ್ರೋ.ಪೃಥ್ವಿರಾಜ, ಉಪನ್ಯಾಸಕರಾದ ಬಸವರಾಜ ಮಾಳೇನಹಳ್ಳಿ, ಚಂದ್ರಶೇಖರ್ ಎಂ.ಕೆ., ಸುನೀಲ್ ಹಿರೇಮನಿ, ರಾಜೀವ ಎಂ.  ಪ್ರೋ.ಸುನಿಲ್  ಸೇರಿದಂತೆ ಮತ್ತಿತರ ಗಣ್ಯರು ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. 

      ವಿದ್ಯಾರ್ಥಿನಿ ಗಂಗಾ ಪ್ರಾರ್ಥಿಸಿದರು. ಬಿ.ಬಿ. ಜಯನಾಬಿ ಸ್ವಾಗತಿಸಿದರು. ಪ್ರೊ. ದೇವರಾಜ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ, ಅಕ್ಷತಾ ನಿರೂಪಿಸಿ, ಶ್ವೇತಾ ಮಾಳಗಿ ವಂದಿಸಿದರು. ಮುಂಜಾನೆಯಿಂದ ಸಂಜೆಯವರೆಗೂ ನಡೆದ ವೈವಿದ್ಯಮಯ ಜನಪದ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಅನೇಕ ಪ್ರಕಾರಗಳ ಕಲೆಗಳು ಪ್ರದರ್ಶನಗೊಂಡು ಸಾವಿರಾರು ವಿದ್ಯಾರ್ಥಿಗಳ ಗಮನ ಸೆಳೆದವು. ನಿರ್ಣಾಯಕರಾಗಿ ರಾಜ್ಯ ಮಟ್ಟದ ತೀರ​‍್ುಗಾರರಾದ ಕೆ.ಸಿ.ನಾಗರಜ್ಜಿ, ಗುಡ್ಡರಾಜ ಹಲಗೇರಿ, ಕೆ.ಎಸ್‌.ನಾಗರಾಜ, ಮಂಜುನಾಥ ಸುಂಕಾಪುರ, ಕೃಷ್ಣಮೂರ್ತಿ ಗುಂಗೇರ, ಎಂ.ಎಸ್‌.ಕೋರಿಶೆಟ್ಟರ, ಎ.ಎ.ಕಿಲ್ಲೇದಾರ ಮತ್ತಿತರರು ತಮ್ಮ ಕಾರ್ಯವನ್ನು ನಿರ್ವಹಿಸಿದರು. 



ಸುದ್ದಿ ಓದಿ