ಶಿಗ್ಗಾವ್

ತತ್ವಪದಗಳ ಹಾಡುಗಾರ ಸಿದ್ಧಲಿಂಗಪ್ಪ ನರೇಗಲ್‌ಗೆ ಜಾನಪದ ಅಕಾಡೆಮಿ ಪ್ರಶಸ್ತಿ

ತತ್ವಪದಗಳ ಹಾಡುಗಾರ ಸಿದ್ಧಲಿಂಗಪ್ಪ ನರೇಗಲ್‌ಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಶಿಗ್ಗಾವಿ 23: ತಾಲೂಕಿನ ಬಂಕಾಪುರ  ತತ್ವಪದಗಳ ಹಾಡುಗಾರ ಹಾರೋ​‍್ಮನಿಯಂ ಮಾಸ್ತರ್ ಎಂದೇ ಚಿರಪರಿಚಿತರಾದ ಪಟ್ಟಣದ ಸಿದ್ಧಲಿಂಗಪ್ಪ ನರೇಗಲ್‌ರವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಹಾವೇರಿ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ ಎಂದು ಯುವ ಮುಖಂಡ ಬಸವರಾಜ ನಾರಾಯಣಪುರ ಹೇಳಿದರು. 

ಅವರು 2020/21 ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ಧಲಿಂಗಪ್ಪ ನರೇಗಲ್ ರವರ ಸನ್ಮಾನ ಸಮಾರಂಭವನ್ನುದ್ದೇಸಿಸಿ ಮಾತನಾಡಿದ ಅವರು, ಸಿದ್ಧಲಿಂಗಪ್ಪ ನರೇಗಲ್ ರವರು ಬಾಲ್ಯದಿಂದಲೇ ತಮ್ಮ ಸಂಗೀತ ಕಲೆಯನ್ನು ಸಮಾಜ ಸುಧಾರಣೆಗಾಗಿ ನಾಟಕ, ಭಜನೆ, ತತ್ವಪದಗಳನ್ನು ಹಾರೋ​‍್ಮನಿಯಂ ಬಾರಿಸುವಮೂಲಕ ತಮ್ಮದೇಯಾದ ಕೊಡುಗೆ ನೀಡುವಮೂಲಕ ಅಖಂಡ ಧಾರವಾಡ ಜಿಲ್ಲೇಯಲ್ಲಿ ಚಿರಪರಿಚಿತರಾಗಿದ್ದಾರೆ. ಅವರು ಪ್ರಶಸ್ತಿ ಹಿಂದೆ ಬಿಳದೆ, ಪ್ರಶಸ್ತಿಯೇ ತಮ್ಮನ್ನರಸಿ ಬರುವಹಾಗೆ ಮಾಡಿದ್ದಾರೆ. ಇದರಿಂದ ಅವರ ನಾಲ್ಕು ದಶಕಗಳ ಸೇವೆ ಸಾರ್ಥಕವಾಗಿದೆ. ಅವರಿಗೆ ಆ ದೇವರು ಆಯೂರಾರೋಗ್ಯ ಭಾಗ್ಯ ಕರುಣಿಸಿ ಅವರಿಗೆ ಒಲಿದುಬಂದ ಕಲೆಯನ್ನು ಇಂದಿನ ಯುವಸಮೂಹಕ್ಕೆ ಧಾರೆ ಎರೆಯುವಂತಾಗಲಿ ಎಂದು ಹೇಳಿದರು. 

ರಾಮಕೃಷ್ಣ ಆಲದಕಟ್ಟಿ, ಮಂಜುನಾಥ ಕೂಲಿ, ನಿಂಗನಗೌಡ್ರ ಪಾಟೀಲ, ಎಂ.ಎಸ್‌.ನರೇಗಲ್, ರಾಘವೇಂದ್ರ ಕಬ್ಬೂರ, ಮಹದೇವಪ್ಪ ಸುಂಕದ, ಮಂಜುನಾಥ ತಳವಾರ, ಸುರೇಶ ಕುರಗೋಡಿ, ಡಿ.ಎನ್‌.ಕುಡಲ, ಅರ್ಜುನ ಜೋತೆಪ್ಪನವರ, ಜಗದೀಶ ಹುರಳಿ, ನಾಗಪ್ಪ ರಾಣೋಜಿ, ಸೋಮಣ್ಣ ಕುರಿ, ಯಲ್ಲಪ್ಪ ಸುಂಕದ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ