ತೆಲಂಗಾಣ: ಕಾರು ಪಲ್ಟಿ, ಐವರು ಸಾವು
ನಲ್ಗೊಂಡ, ಸೆ 4: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೈದರಾಬಾದ್ ನೀರು ಸರಬರಾಜು ಗೋಪುರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಅದರಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ಚಿಟಪಳ್ಳಿ ಮಂಡಲದ ದೈರ್ಯಪುರಿ ತಾಂಡ ಸಮೀಪ ಹೈದರಾಬಾದ್-ನಾಗಾರ್ಜುನ ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದಿದೆ.
ಕಾರು, ಹೈದರಾಬಾದ್ನಿಂದ ನಾಗಾರ್ಜುನಸಾಗರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗಜ್ಜಾಗಿದ್ದು, ಗಾಯಗೊಂಡವರನ್ನು ವಾಹನದಿಂದ ತೆಗೆಯಲು ಪೊಲೀಸರು ಸಾಹಸ ಪಟ್ಟಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.