ರಾಷ್ಟ್ರೀಯ

ಕಳ್ಳಭಟ್ಟಿ ಸೇವಿಸಿ ಪ್ರಯಾಗ್ ರಾಜ್ ನಲ್ಲಿ ಐದು ಮಂದಿ ಸಾವು

ಕಳ್ಳಭಟ್ಟಿ ಸೇವಿಸಿ ಪ್ರಯಾಗ್ ರಾಜ್ ನಲ್ಲಿ ಐದು ಮಂದಿ ಸಾವು

ಪ್ರಯಾಗ್ ರಾಜ್, ನವೆಂಬರ್.21: ಉತ್ತರ ಪ್ರದೇಶದಲ್ಲಿ ದಿವಾಳಿ ಸಂದರ್ಭದಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪುವವರ ಪ್ರಕರಣ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಪ್ರಯಾಗ್ ರಾಜ್ ಜಿಲ್ಲೆಯ ಫುಲ್ ಪುರ್ ಎಂಬಲ್ಲಿ ಕಳ್ಳಭಟ್ಟಿ ಸೇವಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಿಗ್ಗೆ ಅಮಲಿಯಾ ಗ್ರಾಮದಲ್ಲಿ ಸಾವನ್ನಪ್ಪಿದ ಜನರು ಸರ್ಕಾರಿ ನಿಯಂತ್ರಿತ ಅಂಗಡಿಯೊಂದರಿಂದ ಸ್ಥಳೀಯವಾಗಿ ತಯಾರಿಸಿದ ಮದ್ಯವನ್ನು ಖರೀದಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಹಲವು ಜನರು ಗಂಭೀರ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ದಾಖಲಾಗಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಂಗಡಿಗೆ ಬೀಗ ಮುದ್ರೆ ಹಾಕಿ, ಅಂಗಡಿಯ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತರನ್ನು ಬಸಂತ್ ಲಾಲ್ ಪಟೇಲ್ (55), ಶಂಭು ನಾಥ್ ಮೌರ್ಯ (53), ರಾಜ್ ಬಹದ್ದೂರ್ ಗೌತಮ್ (50), ರಾಜೇಶ್ ಗೌರ್ (46) ಮತ್ತು ಪ್ಯಾರೆ ಲಾಲ್ (48) ಎಂದು ಗುರುತಿಸಲಾಗಿದೆ.

ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ಮತ್ತು ಎಸ್‌ ಎಸ್‌ ಪಿ ಸರ್ವಶ್ರೇಷ್ಟ್ ತ್ರಿಪಾಠಿ ಸ್ಥಳಕ್ಕೆ ಧಾವಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಹಿಂದೆ ಆರು ಜನರು ಲಕ್ನೋದಲ್ಲಿ ಮತ್ತು ಏಳು ಜನರು ಹಾಪುರದಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿದ್ದರು.

ಸುದ್ದಿ ಓದಿ