ಶಿಗ್ಗಾವ್

ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆ : ದುಂಡಿಗೌಡ್ರ

ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆ : ದುಂಡಿಗೌಡ್ರ

ಶಿಗ್ಗಾವಿ,20 : ಗ್ರಾಮದ ಅಭಿವೃದ್ದಿಗೆ ಮೊದಲ ಅಧ್ಯತೆ ಯನ್ನು ಕೊಡಬೇಕು ಎಂದು ಭಾಜಪ ಮುಖಂಡ ಶ್ರೀಕಾಂತ ದುಂಡಿಗೌಡ್ರ ಹೇಳಿದರು.  

ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಆಯ್ಕೆಯಾದ ಸಂಗಪ್ಪ ಒಡವಿ ಅವರಿಗೆ ಗ್ರಾಮದ ಹಿರಿಯರೊಂದಿಗೆ ಶ್ರೀಕಾಂತ ದುಂಡಿಗೌಡ್ರ ಗೌರವಿಸಿ ಸನ್ಮಾನಿಸಿ ಮಾತನಾಡಿದ ಅವರು ಗ್ರಾಮಗಳಲ್ಲಿ ಅವಶ್ಯವಿರುವ ಕಡು ಬಡವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತಾಗಲಿ ಎಂದರು.   

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ತಾಲೂಕ ಬಿಜೆಪಿ ಮಾಜಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ,ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಶಿಧರ ಹೊನ್ನಣ್ಣನವರ,ಶಿವಾನಂದ ಸೊಬರದ, ನಿಂಗಪ್ಪ ಚಿಗರಿ, ಬಸವರಾಜ ಕುರುಗೋಡಿ, ವೀರೇಶ್ ಬಾವಿಕಟ್ಟಿ, ರಾಜು ಹಿಂಡಿ, ಸುರೇಶ್ ಒಡವಿ, ಚನ್ನಬಸಪ್ಪ ಗುಳದಕೇರಿ, ಶರಣಯ್ಯ ಪೂಜಾರ,ಶರಣಪ್ಪ ಕಿವುಡನವರ ಉಪಸ್ಥಿತರಿದ್ದರು. 


ಸುದ್ದಿ ಓದಿ