ಅಗ್ನಿಶಾಮಕ ವಾಹನಕ್ಕೆ ಶೈಲಜಾ ಪಾಟೀಲ್ ಪೂಜೆ
ಮಾಂಜರಿ 03: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ್ ಕೋರೆ ಇವರ ವಿಶೇಷ ಪ್ರಯತ್ನಿಂದ ರಾಜ್ಯ ಸರ್ಕಾರದ ಅಗ್ನಿಶಾಮಕ ವಿಭಾಗದಿಂದ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಸ್ವತಂತ್ರ ಮಂಜೂರಾತಿ ಪಡೆದ ಅಗ್ನಿಶಾಮಕ ಠಾಣೆಯನ್ನು ಇಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಕೋರೆ ಉದ್ಘಾಟಿಸಿದರು.
ಮೊದಲಿಗೆ ಸ್ವಾಗತ ಮತ್ತು ಪ್ರಸ್ತಾವಿಕ ಅಂಕಲಿ ಗ್ರಾಮ ಪಂಚಾಯಿತಿಯ ಸದಸ್ಯ ಸುರೇಶ್ ಪಾಟೀಲ್ ಮಾತನಾಡಿ ಅಂಕಲಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ತುರ್ತ ಪರಿಸ್ಥಿತಿಯಲ್ಲಿ ಅಗ್ನಿ ಅವಘಡ ಉಂಟಾದರೆ ಚಿಕ್ಕೋಡಿ ಅಥವಾ ಬೆಳಗಾವಿಂದ ಅಗ್ನಿಶಾಮಕ ದಳವನ್ನು ಕರೆಸಲಾಗುತ್ತಿತ್ತು ಆದರೆ ಅವರು ಬರುವಷ್ಟರಲ್ಲಿ ಅಪಾರ ಹಾನಿ ಉಂಟಾಗಿ ಸರ್ವಸಾಮಾನ್ಯ ಜನರಿಗೆ ಆರ್ಥಿ ಕ ನಷ್ಟ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಪ್ರಭಾಕರ್ ಕೋರೆ ಇವರಿಗೆ ಈ ಭಾಗದ ಹಲವಾರು ಜನ ಅಂಕಲಿಯಲ್ಲಿ ಅಗ್ನಿಶಾಮಕ ಠಾಣೆಯನ್ನು ನಿಮರ್ಿಸಬೇಕೆಂದು ಮನವಿ ಮತ್ತು ಬೇಡಿಕೆ ಇಟ್ಟಿದ್ದರು. ನಮ್ಮ ಬೇಡಿಕೆಗೆ ಸ್ಪಂದಿಸಿ ಕೋರೆಯವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಂಕಲಿ ಗ್ರಾಮಕ್ಕೆ ಸ್ವತಂತ್ರವಾದ ಅಗ್ನಿಶಾಮಕ ಠಾಣೆಯನ್ನು ಮಂಜೂರಾತಿ ಪಡೆದಿದ್ದರಿಂದ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಅಂಕಲಿ ಗ್ರಾಪಂ ಅಧ್ಯಕ್ಷೆ ಶೈಲಜಾ ಪಾಟೀಲ್ ಅವರು ಅಗ್ನಿಶಾಮಕ ವಾಹನಕ್ಕೆ ಪೂಜೆ ಸಲ್ಲಿಸಿದರು. ಸದಸ್ಯರಾದ ವಿವೇಕ್ ಕಾಮತೆ, ಸುರೇಶ ವಡ್ಡರ್, ಕೇದಾರಿ ಕಾಮತೆ, ನಾಗೇಂದ್ರ ಧರನಾಯಕ್, ಸಂಜಯ್ ಚೌದರಿ, ಅಂಕಲಿ ಗ್ರಾಮ ಆಡಳಿತ ಅಧಿಕಾರಿ ಎಸ್ ವಿ ಗವಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಸೋದೆ ಭಂಡಾರೆ ಮತ್ತು ಸಿಬ್ಬಂದಿ ವರ್ಗ ಗ್ರಾಮಸ್ಥರು ಹಾಜರಿದ್ದರು