ರಾಣೆಬೆನ್ನೂರ

ರಾಣೇಬೆನ್ನೂರು ತರಕಾರಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ.

ರಾಣೇಬೆನ್ನೂರು ತರಕಾರಿ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ.

90ಕ್ಕೂ ಹೆಚ್ಚು ಅಂಗಡಿಗಳು ಭಸ್ಮ, ಬಿದಿಗೆ ಬಿದ್ದ ವ್ಯಾಪಾರಿಗಳು

ರಾಣೇಬೆನ್ನೂರು 20: ವಾಣಿಜ್ಯ ನಗರದ ದುರ್ಗಾ ತರಕಾರಿ ಮತ್ತು ಹೂವಿನ ಮಾರುಕಟ್ಟೆ ವ್ಯಾಪ್ತಿಯಲ್ಲಿರುವ ನೂರಾರು ತರಕಾರಿ ಅಂಗಡಿಗಳಿಗೆ ಸೋಮವಾರ ಬೆಳಗಿನ ಜಾವ ಬೆಂಕಿ ತಗುಲಿದ ಪರಿಣಾಮ ತರಕಾರಿ,ನಗದು ಮೂತ್ತ ಮತ್ತಿತರೆ ಸಾಮಗ್ರಿಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ ಗಳ ಹಾನಿ ಸಂಭವಿಸಿದ್ದಲ್ಲದೆ ವ್ಯಾಪಾರಸ್ಥರು ಬೀದಿಗೆ ಬಿದ್ದಿರುವ ಅಘಾತಕಾರಿ ಘಟನೆ ಸಂಭವಿಸಿದೆ. 

ವಾರದ ದಿನವಾದ ರವಿವಾರ ಮಾರುಕಟ್ಟೆಯಲ್ಲಿ ಭರಪುರ ವ್ಯಾಪಾರ ವಹಿವಾಟು ಮಾಡುವುದರ ಮೂಲಕ ಸಂಭ್ರಮದಲ್ಲಿದ್ದ ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿನ ನೂರಾರು ವ್ಯಾಪಾರಿಗಳಿಗೆ ಸಂಭವಿಸಿರುವ ಈ ಅಗ್ನಿ ಅವಘಡದಿಂದಾಗಿ ಬದುಕಿನ ದಾರಿ ಕಾಣದೆ ಕಂಗಾಲಾಗಿರುವ ವ್ಯಾಪಾರಿಗಳ ಆರ್ತನಾದ ಮುಗಿಲು ಮುಟ್ಟಿತ್ತು. 

ಘಟನೆಗೆ ನಿಖರವಾದ ಕಾರಣವೇನು ಎನ್ನುವುದು ಸ್ಪಷ್ಟವಾಗಿಲ್ಲವಾದರೊ ಸೋಮವಾರ ಮಧ್ಯ ರಾತ್ರಿ ಯಾರೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಸಂಕಿಸಲಾಗಿದೆ ಈ ಅಗ್ನಿ ಅವಘಡದಿಂದಾಗಿ 90 ಅಂಗಡಿಗಳಿಗೆ ಬೆಂಕಿ ತಗುಲಿದ್ದು, ವಿವಿಧ ತರಕಾರಿ, ದವಸ ಧಾನ್ಯ, ಹಣ್ಣು ಹಂಪಲು, ಮೇಣಸಿನಕಾಯಿ, ದಿನಸಿ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ ಇದರಿಂದಾಗಿ ಅಂದಾಜು 10,ಲಕ್ಷ ರೂ ಗಳಿಗೂ ಹೆಚ್ಚು ಹಾನಿ ಸಂಭವಿಸಿರುವುದಾಗಿ ಹೇಳಲಾಗಿದೆ ಬಹುತೇಕ ಮಹಿಳಾ ವ್ಯಾಪಾರಿಗಳೇ ಹೆಚ್ಚಾಗಿರುವ ಮಾರುಕಟ್ಟೆಯಲ್ಲಿ ಸುದ್ದಿ ತಿಳಿಯುತ್ತಿದಂತೆ ತಮ್ಮ ತಮ್ಮ ಅಂಗಡಿಗಳಲ್ಲಿ ಅರ್ಭಟಿಸುತ್ತಿರುವ ಬೆಂಕಿಯ ಕೆನ್ನಾಲಿಗೆಯನ್ನು ಕಂಡು ಕಣ್ಣೀರಿಡುತ್ತಿರುವುದು ಸಾಮಾನ್ಯವಾಗಿತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುದ್ದಿ ಕಾಳ್ಗಚ್ಚಿನಂತೆ ನಗರವು ಸೇರಿದಂತೆ ತಾಲೂಕಿನಾದ್ಯಂತ ಹರಡಿ ಜನರು ತಂಡೂಪ ತಂಡವಾಗಿ ಸ್ಥಳಕ್ಕೆ ಧಾವಿಸಿದ್ದರಿಂದ ಅವರನ್ನು ನಿಯಂತ್ರಿಸುವ ಪೋಲಿಸರು ಹರ ಸಾಹಸ ಪಡುವಂತಾಗಿತ್ತು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ವಾಹನಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿರುವುದು ಸಾರ್ವಜನಿಕರು ತಮ್ಮ ಮೇಚ್ಚುಗೆ ವ್ಯಕ್ತಪಡಿಸುತ್ತಿದ್ದರು.ಎಸ್.ಪಿ ಹನುಮಂತರಾಯ್ ಎ.ಸಿ, ತಾಲೂಕಾ ದಂಡಾಧಿಕಾರಿ  ಶಂಕರ ಜಿ.ಎಸ್, ನಗರ ಸಭೆ ಪೌರಾಯುಕ್ತ ಉದಯಕುಮಾರ ಬಿ.ಟಿ, ಶಿವಾಶನಂದ ಉಳ್ಳಾಗಡ್ಡಿ ಸೇರಿದಂತೆ ನಗರಸಭೆ ಅಧ್ಯಕ್ಷರು ಸದಸ್ಯರು ಮತ್ತಿತರ ಮುಖಂಡರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು ಪ್ರಕರಣ ಧಾಖಲುಗೂಂಡಿದ್ದು ತನಿಖೆ ಕೈಗೂಂಡಿದ್ದಾರೆ.

ಘಟನೆ ನಡೆದಿರುವುದು ಅಘಾತಕಾರಿ ಸಂಗತಿ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೂರ ಬರಬೇಕು ಶೀಘ್ರ ತನಿಖೆ ನಡೆಸಿ ತಪ್ಪಿತಸ್ತರನ್ನು ಬಂಧಿಸಿ ಶಿಕ್ಷೇಗೆ ಒಳಪಡಿಸಬೇಕು. ಪ್ರತಿಯೂಬ್ಬರಿಗೂ ತಲಾ 5,ಸಾವಿರ ರೂ ಗಳ ಪರಿಹಾರ ಧನ ವಿತರಿಸಲು ಶಾಸಕರು ನಿರ್ಧರಿಸಿದ್ದಾರೆ

-ಮಂಗಳ ಗೌರಿ ಪೂಜಾರ.

ಸರ್ಕಾರದಿಂದ ದೂರೆಯ ಬಹುದಾದ ಎಲ್ಲ ರೀತಿಯ ಪರಿಹಾರ ದೂರಕಿಸಲಾಗುವುದು ಹಾನಿಗೂಂಡ ಪ್ರತಿಯೂಂದು ಅಂಗಡಿಕಾರರಿಗೆ ತಲಾ 5,ಸಾವಿರ ರೂ ಗಳ ಪರಿಹಾರ ಧನ ನೀಡಲಾಗುವುದು

-ಆರ್.ಶಂಕರ್ ಮಾಜಿ ಸಚಿವ.

ಸುದ್ದಿ ಓದಿ