ರಾಜ್ ಕೋಟ್ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ದುರಂತ- ಐವರ ಸಜೀವ ದಹನ
ರಾಜ್
ಕೋಟ್ ನವೆಂಬರ್ 27: ಗುಜರಾತಿನ ರಾಜ್ ಕೋಟ್ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಕಾಣಿಸಿಕೊಂಡ ಭೀಕರ ಬೆಂಕಿ ದುರಂತದಲ್ಲಿ 5 ಕೊರೊನಾ ಸೋಂಕಿತರು ಸಜೀವ
ದಹನಗೊಂಡು ಇತರೆ 30 ಜನರಿಗೆ ಗಾಯಗಳಾಗಿದೆ.
ರಾಜ್
ಕೋಟ್ ಸರ್ದಾರ್ ನಗರದ ಮಾವಡಿಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ನಂತರ ಇತರ ಭಾಗಗಳಿಗೂ
ಹರಡಿದೆ.
ಬೆಂಕಿ
ಅವಘಡ ಸಮಯದಲ್ಲಿ 11 ರೋಗಿಗಳು ಐಸಿಯುದೊಳಗೆ ಇದ್ದರು.
ಒಟ್ಟು 33 ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಗ್ನಿ
ಅನಾಹುತಕ್ಕೆ ನಿಖರ ಕಾರಣ ಏನು ಎಂಬುದು ನಿಖರವಾಗಿ ಗೊತ್ತಾಗಿಲ್ಲ .
ಕೂಡಲೇ ಆಸ್ಪತ್ರೆಗೆ ಧಾವಿಸಿದ ರಾಜ್ ಕೋಟ್ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಇದ್ದ ಎಲ್ಲ ರೋಗಿಗಳನ್ನೂ ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಗೆ ಐಸಿಯುದಲ್ಲಿದ್ದ ಕೆಲವರಿಗೆ ಅನೇಕರಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.