ಆರ್ಥಿಕ ಶಿಕ್ಷಣ ಸಾರ್ವಜನಿಕ ಜಾಗೃತಿ ಅಭಿಯಾನ
ಬೈಲಹೊಂಗಲ: ಪ್ರತಿಯೊಬ್ಬರೂ ಬ್ಯಾಂಕಿನ ಗ್ರಾಹಕರಾಗಬೇಕು ಸ್ವತಂತ್ರರಾಗಿ ಬ್ಯಾಂಕ್ ವ್ಯವಹಾರ ನಡೆಸುವ ಕನಿಷ್ಠ ಜ್ಞಾನ ಹೊಂದಬೇಕೆಂಬ ಉದ್ದೇಶದಿಂದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ತಿಳುವಳಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೆವಿಜಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸುದೆಂದ್ರ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ಚೆನ್ನಮ್ಮ ಸಮಾಧಿ ರಸ್ತೆಯ ಗಣಾಚಾರಿ ಮಹಾವಿದ್ಯಾಲಯದಲ್ಲಿ ನಡೆದ ಸಾಮಾನ್ಯರಿಗಾಗಿ ಆರ್ಥಿಕ ಶಿಕ್ಷಣ ಸಾರ್ವಜನಿಕ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ,ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಕುರಿತು ತಿಳಿಸಿದರು.
ಕೆವಿಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಮಾತನಾಡಿ,ಶೈಕ್ಷಣಿಕ ಸಾಲ ಸೌಲಭ್ಯ ಉಳಿತಾಯ ಖಾತೆಯ ಮಹತ್ವ ನಗದು ರಹಿತ ವ್ಯವಹಾರ ಸೈಬರ್ ವಂಚನೆ ಕುರಿತು ಜಾಗೃತಿ ಬ್ಯಾಂಕಿನ ಇತರೇ ವ್ಯವಹಾರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕೆವಿಜಿ ಶಾಖಾ ವ್ಯವಸ್ಥಾಪಕ ಅಶೋಕ ಸಂಗಟಿ ಆರ್ಥಿಕ ಸಮಾಲೋಚಕಿ ಗೀತಾ ಖಾನಪೇಠ ಮಾತನಾಡಿದರು.ಪ್ರಾಚಾರ್ಯ ಡಾ ಸಿ ಬಿ ಗಣಾಚಾರಿ ವೇದಿಕೆ ಮೆಲೆ ಇದ್ದರು.
ಕೆವಿಜಿ ಬ್ಯಾಂಕ ಸಿಬ್ಬಂದಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಇದ್ದರು.