ಕುಷ್ಟಗಿ

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಸಿಇಟಿ ಕಾರ್ಯಗಾರಕ್ಕೆ ಚಾಲನೆ

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಸಿಇಟಿ ಕಾರ್ಯಗಾರಕ್ಕೆ ಚಾಲನೆ

ಲೋಕದರ್ಶನ ವರದಿ  

ಕುಷ್ಟಗಿ 01: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಅಪರ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರ್ಗಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕುಷ್ಟಗಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಮುನಿರಾಬಾದ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಗ್ಗೆ ಇಲ್ಲಿನ ಬಿ ಆರ್ ಸಿ ಕಚೇರಿಯಲ್ಲಿ ಏರಿ​‍್ಡಸಿದ್ದ 2021-22 ನೇ ಸಾಲಿನಲ್ಲಿ ಟಿಇಟಿ ಪಾಸಾದ 6 ರಿಂದ 8 ನೇ ತರಗತಿ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಸಿಇಟಿ ಕಾರ್ಯಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.  


ನಂತರ ಮಾತನಾಡಿದ ಅವರು  ತಾಲೂಕಿನ ವಿವಿಧ ಡೆಯ 45 ಅಭ್ಯರ್ಥಿಗಳು ಕಾರ್ಯಗಾರದಲ್ಲಿ ತರಬೇತಿ ಪಡೆದರು. ಸಿಇಟಿ ತರಬೇತಿ ಕಾರ್ಯಗಾರವು ಏ.01 ರಿಂದ ಮೇ. 21ರ ವರೆಗೂ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3ರವರೆಗೂ 40 ದಿನಗಳ ಕಾಲ ನಡೆಯುತ್ತದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು   


ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.  

ಸಿಇಟಿ ನೋಡಲ್ ಅಧಿಕಾರಿ ಶರಣಪ್ಪ ತಮ್ಮಿನಾಳ ಅವರು ತರಬೇತಿ ಕಾರ್ಯಗಾರದ ಸಂಪೂರ್ಣ ಜವಾಬ್ದಾರಿ ವಹಿಸಿದ್ದಾರೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಬಿಆರ್‌ಸಿ ಶ್ರೀಶೈಲ್ ಸೋಮನಕಟ್ಟಿ, ಇಸಿಓ ದಾವಲಸಾಬ ವಾಲೇಕಾರ, ಸಂಪನ್ಮೂಲ ವ್ಯಕ್ತಿಗಳಾದ ಬೀರ​‍್ಪ ಕಡ್ಲಮಟ್ಟಿ, ಶಾಮೀಸಾಬ ವಾಲೀಕಾರ, ರಾಜಸಾಬ ನಧಾಪ್, ನಿಂಬಮ್ಮ ತುಂಬದ ಸೇರಿದಂತೆ ಇನ್ನಿತರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ