ಹಬ್ಬ ಹರಿದಿನಗಳು ಭಾವೈಕ್ಯತೆಯ ಪ್ರತಿಕ: ಡಾ. ಕೇಲಗಾರ.
ರಾಣೇಬೆನ್ನೂರ 15: ಭಾರತೀಯ ಸಂಸ್ಕ್ರುತಿ ಪರಂಪರೆಯಲ್ಲಿ ನಾಡ ಹಬ್ಬ ದಸರಾ ಮಹೋತ್ಸವ ಆಚರಣೆಗೆ ದಾರ್ಮಿಕ ಹಿನ್ನೆಲೆ ಇದೆ ಹಬ್ಬ ಹರಿದಿನಗಳು ಮನುಷ್ಯನ ಮಾನಸಿಕವಿಕಾಸತೆಯ ಜೂತೆಗೆ ಭಾವೈಕ್ಯತೆ ಪ್ರತಿಭಿಂಬಿಸುವ ಮತ್ತು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಮಾಜದಲ್ಲಿ ಶಾಂತಿ ನೆಮ್ಮದಿ ನೀಡುವಲ್ಲಿ ಸಹಕಾರಿಯಾಗಿದೆ ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.
ನಗರ ಹೂರ ವಲಯದ ಮಾಗೋಡ ರಸ್ತೆ ಸಾರಿಗೆ ಸಂಸ್ಥೆಯ ಘಟಕದಲ್ಲಿ ದಸರಾ ಮಹೋತ್ಸವದ ನಿಮಿತ್ತ ಸಾಂಪ್ರದಾಯಕವಾಗಿ ಅಯೋಜಿಸಲಾಗಿದ್ದ ಅಯುಧ ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಹಬ್ಬಗಳು ಸಂಪ್ರದಾಯ ಬದ್ದವಾಗಿ ನೆಡೆಯಬೇಕು ಇದರಿಂದ ಸಾರಿಗೆ ಸಂಸ್ಥೆಯ ಚಾಲಕರ, ನಿರ್ವಾಹಕರು ಮತ್ತು ತಾಂತ್ರಿಕ ಕಾರ್ಮಿಕರಲ್ಲಿ ಉತ್ಸಾಹದ ವಾತಾವರಣ ನೀಡುವುದರ ಜೂತೆಗೆ ನಿರಂತರ ತಮ್ಮ ಕರ್ತವ್ಯವನ್ನು ಮೇರೆಯುವ ಎಲ್ಲರಿಗೂ ಸಂತೋಷ ತರಲಿದೆ ಎಂದ ಅವರು ಕಾರ್ಮಿಕರು ಸಾರಿಗೆ ಸಂಸ್ಥೆಯ ನಿಜವಾದ ರೂವಾರಿಗಳಾಗಿದ್ದಾರೆ ಹಬ್ಬವು ಎಲ್ಲರಿಗೂ ಮತ್ತು ಕುಟುಂಬದ ಎಲ್ಲ ಸದಸ್ಯರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯ ಜೂತೆಗೆ ಸುಭದ್ರ ಜೀವನಕ್ಕೆ ನಾಂದಿಯಾಗಲೇಂದು ಡಾ. ಕೇಲಗಾರ ಅವರು ಹರಸಿ, ಹಾರೈಸಿ ಸಿಹಿ ವಿತರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಘಟಕದ ವ್ಯವಸ್ಥಾಪಕ ಶಿವಮೋರ್ತಿ, ಚಾಲಕರು, ನಿರ್ವಾಹಕರು, ಕಾರ್ಮಿಕರು, ಮೇಕ್ಯಾನಿಕಲ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.