ವಿಜೃಂಭಣೆಯಿಂದ ಹನುಮಂತ ದೇವರ ಜಾತ್ರೆ: ಮಹಾರಥೋತ್ಸವ
ಬೈಲಹೊಂಗಲ 30: ಪಟ್ಟಣದ ಇತಿಹಾಸ ಪ್ರಸಿದ್ಧ ಹನುಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಭಕ್ತರ ಹಷೋದ್ಘಾರ ನಡುವೆ ಶನಿವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ತಳೀರು, ತೋರಣ, ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸಿದ ದೇವಸ್ಥಾನದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹನುಮಂತ ದೇವರ ಪ್ರತಿಮೆಗೆ ವಿವಿಧ ಪುಷ್ಪ ಮಾಲೆಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು.
ಬೆಳಗ್ಗೆಯಿಂದ ರಾತ್ರಿಯವರೆಗೆ ಸಾವಿರಾರು ಭಕ್ತರು ಹನುಮಂತ ದೇವರ ಪ್ರತಿಮೆಗೆ ಹೂವು, ಹಣ್ಣು, ಮಾಲೆ, ಕಾಯಿ, ಕರ್ೂರ, ನೈವೇದೆ ಸಲ್ಲಿಸಿ ಶ್ರದ್ಧೆ, ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದರು.
ಮಹಾರಥೋತ್ಸವ ಬೃಹತ್ ಹೂವಿನ ಮಾಲೆ, ತೆಂಗಿನಗರಿ, ಬಾಳೆದಿಂಡುಗಳಿಂದ ಅಲಂಕೃತಗೊಂಡಿತ್ತು. ಭಕ್ತರು ಹರಹರ ಮಹಾದೇವ, ಹನುಮಂತ ದೇವರ ಮಹಾರಾಜಕೀ ಜೈ ಎನ್ನುತ್ತ ರಥೋತ್ಸವ ಎಳೆದು ಪುನೀತರಾದರು.
ದೇವಸ್ಥಾನ ಆವರಣದಿಂದ ಆರಂಭವಾದ ರಥೋತ್ಸವ ಉಪ್ಪಿನ ಕೂಟವರೆಗೆ ಸಂಚರಿಸಿ ಮರಳಿ ದೇವಸ್ಥಾನ ಅವರಣಕ್ಕೆ ಬಂದು ತಲುಪಿತು.
ಮುಖಂಡರಾದ ಮಹಾಬಳೇಶ್ವರ ಬೋಳನ್ನವರ, ಪುರಸಭೆ ಸದಸ್ಯ ವಿಜಯ ಬೋಳನ್ನವರ, ಶ್ರೀಶೈಲ ಗೀರನವರ, ದೇವೇಂದ್ರ್ಪ ಪೂಜೇರಿ, ಗುಂಡು ಪೂಜೇರಿ, ಭಗವಂತ ಬಡಿಗೇರ, ಉಮೇಶ ಬೋಳನ್ನವರ, ಸೋಮನಗೌಡ ಪಾಟೀಲ ಹಾಗೂ ಜಾತ್ರಾ ಕಮೀಟಿ ಸದಸ್ಯರು ಇದ್ದರು.