ಯುವಜನೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ರಾಣೇಬೆನ್ನೂರು 20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾವೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾವೇರಿ ಹಾಗೂ ಬಿಎಜೆಎಸ್ಎಸ್ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಬಿಎಜೆಎಸ್ಎಸ್ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ರಾಜ್ಯಮಟ್ಟದ ಯುವಜನೋತ್ಸವಕ್ಕೆ, ಮಹಾವಿದ್ಯಾಲಯ ವಿದ್ಯಾರ್ಥಿನಿಯರಾದ, ಶ್ವೇತಾ ಮಾಳಗಿ ಏಕಾಂಕ ನಾಟಕಕ್ಕೆ ಬಿ.ಕಾಂ ವಿದ್ಯಾರ್ಥಿನಿ, ಬೀಬೀ ಜೈನಬಿ ಆಶು ಭಾಷಣ ಸ್ಪರ್ಧೆಗೆ ಬಿ.ಕಾಂ ವಿದ್ಯಾರ್ಥಿನಿ, ಜಾನಪದ ಗೀತೆ ಅಂದ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ, ಪೂಜಾ, ಪ್ರೀತಿ, ಗಂಗಾ, ಇತರರು ಯುವಜನೋತ್ಸವ ರಾಜ್ಯ ಮಟ್ಟಕ್ಕೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ, ಇವರಿಗೆ ಬಿಜೆಎಸ್ಎಸ್ ಸಮೂಹ ಶಿಕ್ಷಣ ಆಡಳಿತಾಧಿಕಾರಿ ಡಾ.ಆರ್ ಎಂ ಕುಬೇರಪ್ಪ ಅವರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಸುರೇಶ ಬಣಕಾರ, ಪ್ರೊ.ಬಸವರಾಜ ಮಾಳೇನಹಳ್ಳಿ, ಪ್ರೊ,ಎಚ್ ಎ ಭಿಕ್ಷಾವರ್ತಿಮಠ ಗೌರವ ಉಪನ್ಯಾಸಕರಾದ ದೇವರಾಜ ಹಂಚಿನಮನಿ,ಚಂದ್ರಶೇಖರ್ ಎಂ ಕೆ. ಸುನೀಲ್ ಹಿರೇಮನಿ, ರಾಜೀವ ಎಂ ಸಂತೋಷ, ರಾಜೀವ ಕೆ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗವು ಶುಭ ಹಾರೈಸಿದ್ದಾರೆ.