ಪುರಸಭೆಯ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸನ್ಮಾನ
ಸಿಂದಗಿ 16: ಈಗಿರುವ 14 ತಿಂಗಳ ಅವಧಿಯ ಅಧಿಕಾರ ಅತೀ ಕ್ಷಿ-್ಲಷ್ಠಕರ ಅವಧಿಯಲ್ಲಿ ಶಾಸಕರ ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಪ್ರಮಾಣಿವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧನೆಯಾಗುವಂತ ಅಧಿಕಾರ ನಡೆಸುವೆ ಅದಕ್ಕೆ ಸಾರ್ವಜನಿಕರ ಸಹಕಾರವು ಬಹುಮುಖ್ಯ ಎಂದು ನೂತನ ಪುರಸಭೆ ಅದ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಗೆಳೆಯರ ಬಳಗ ಹಾಗೂ ಪಂಚಮಸಾಲಿ ಸಮಾಜದವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಟ್ಟಣದಲ್ಲಿ 10 ಸಾವಿರ ಮನೆಗಳಲ್ಲಿ ಬರೀ 2500 ಮನೆಗಳಿಗೆ ಮಾತ್ರ ಪರವಾನಿಗೆ ಪಡೆದ ನಳಗಳಿವೆ ಇನ್ನೂಳೀದವುಗಳು ಅಕ್ರಮವಾಗಿವೆ ಅದಕ್ಕೆ ಅವುಗಳ ಸಕ್ರಮಗೊಳಿಸಿಕೊಳ್ಳಲು 4 ಜನ ಸಿಬ್ಬಂದಿಯನ್ನು ಕಂಪ್ಯೂಟರ ಸಮ್ಮೇತ ನೆಮಕ ಮಾಡಿದ್ದೇವೆ ಸಾರ್ವಜನಿಕರು ಸಹಕರಿಸಿ ಎಲ್ಲರು ನೊಂದಣಿ ಮಾಡಬೇಕು ಮತ್ತು ಉತಾರಿಯ ಬಗ್ಗೆ ಎಲ್ಲೆಡೆ ಸಮಸ್ಯೆ ಹೆಚ್ಚು ಕೇಳಿ ಬರುತ್ತಿದ್ದು ಅದಕ್ಕೆ ಕಂಪ್ಯೂಟರ ಉತಾರೆ ಸಲುವಾಗಿ ಎಲ್ಲರು ಸೂಕ್ತ ದಾಖಲಾತಿಗಳನ್ನು ಕೊಟ್ಟು ಮನೆಗೆ ಬಂದ ಸಿಬ್ಬಂದಿ ಜೊತೆ ಸಹಕಾರ ನೀಡಿ ದೃಢಿಕರಣಗೊಳೀಸಿಕೊಳ್ಳಬೇಕು ಇದರಿಂದ ಪುರಸಭೆಗೆ ಆಧಾಯ ಹೆಚ್ಚಾಗುತ್ತದೆ ಇದರಿಂದ ಪಟ್ಟಣದ ಸುಧಾರಣೆ ಮಾಡಲು ಸಾದ್ಯವಾಗುತ್ತದೆ ಇಂತಹ ಹತ್ತು ಹಲವಾರು ಸಮಸ್ಯೆಗಳು ಕೇಳಿ ಬಂದಿದ್ದು ಕೆಲವೆ ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವೆ. ರಸ್ತೆ ಮದ್ಯದಲ್ಲಿ ಡೈವಡರ್ಗಳ ಮೇಲೆ ಹೊಟೆಲಗಳಲ್ಲಿನ ಮಲೀನ ನೀರು ಚೆಲ್ಲುವ ಪರಿಪಾಠ ಇಟ್ಟುಕೊಂಡಿದ್ದು ಅದನ್ನು ತಪ್ಪಿಸುವ ಸ;ಲುವಾಗಿ ಎಲ್ಲ ಹೊಟೇಲ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದು ಅದಕ್ಕೂ ಸಹ ತೀವ್ರಗತಿಯಲ್ಲಿ ಕ್ರಮ ಜರುಗಿಸಲಾಗುವುದು ಎಲ್ಲರು ನನ್ನ ಜೊತೆ ಸಹಕಾರ ನೀಡಿದ್ದಾದಲ್ಲಿ ಪಟ್ಟಣದ ಸೌಂದರೀಕರಣ ಮಾಡಲು ಸಾಧ್ಯ ಎಂದರು.
ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ಕಳೇದ 30 ವರ್ಷಗಳಿಂದ ದಿ.ಎಂ.ಸಿ.ಮನಗೂಳಿಯವರ ಒಡನಾಡಿಯಾಗಿ ಕೆಲಸ ಮಾಡಿದ್ದು ಈ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ನನ್ನ ರಾಜಕೀಯಕ್ಕೆ ಪ್ರವೇಶ ಹೊಂದಿದ್ದಾಗಿನಿಂದ ಅವರ ಅಭಿಮಾನಿಯಾಗಿರುವ ನನಗೆ ಪುರಸಭೆಗೆ ಸ್ಪರ್ಧಿಸಲು ಮೂರು ಬಾರಿ ಜೆಡಿಎಸ್ನಿಂದ ಟಿಕೇಟ ಕೊಟ್ಟು ಆಯ್ಕೆ ಮಾಡುವಲ್ಲಿ ಅವರ ಪ್ರಯತ್ನ ಮರೆಯುವಂತಿಲ್ಲ. ಅವರ ಕನಸ್ಸಿನಂತೆ ನನಗೆ ಇಂದು ಅಧಿಕಾರ ದೊರೆತಿದೆ ಶಾಸಕರ ಹಾಗೂ ಎಲ್ಲ ಸದಸ್ಯರ ಒಡನಾಡಿಯಾಗಿ ಅಧ್ಯಕ್ಷರಿಗೆ ಹೆಗಲುಕೊಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.