ನೂತನ ಮೀಸಲು ಪಡೆ ಪೋಲಿಸ ವರಿಷ್ಠಾಧಿಕಾರಿಗೆ ಸನ್ಮಾನ
ಶಿಗ್ಗಾವಿ 09: ತಾಲೂಕಿನ ಗಂಗೀಭಾವಿ 10ನೇ ಕರ್ನಾಟಕ ರಾಜ್ಯ ಮೀಸಲು ಪಡೆಗೆ ನೂತನವಾಗಿ ಪೋಲಿಸ ವರಿಷ್ಠಾಧಿಕಾರಿಯಾಗಿ ಆಗಮಿಸಿದ ನಾಗರಾಜ.ಬಿ.ಮೆಳ್ಳಾಗಟ್ಟಿ ಅವರನ್ನು ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದಅವರು ನಮ್ಮದು ಸಾರ್ವಜನಿಕರೊಂದಿಗಿನ ಸಂಪರ್ಕ ಹೆಚ್ಚು ಇರುವುದಿಲ್ಲ ಆದ್ದರಿಂದ ನಮ್ಮನ್ನುಊರಾಚೆಗೆ ಸ್ಥಳಾಂತರಿಸುತ್ತಾರೆ ನಮಗೆ ನಿಮ್ಮ ಸಹಕಾರ ಸದಾ ಬೇಕು ಅಲ್ಲದೇ ಪ್ರತಿಯೊಂದುಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿ ಇರಬೇಕುಅಲ್ಲದೇ ಮಾದರಿ ಮೀಸಲು ಪಡೆ ಮಾಡಲು ನಾವು ನೀವೇಲ್ಲರೂಕೈಜೋಡಿಸೋಣಎಂದರು.
ಈ ಸಂದರ್ಭದಲ್ಲಿಕಾರ್ಯನಿರತ ಪತ್ರಕರ್ತರ ಸಂಘದರಾಜ್ಯ ಸಮಿತಿ ಸದಸ್ಯ ಪಿ.ಎಂ.ಸತ್ಯಪ್ಪನವರ, ಜಿಲ್ಲಾಉಪಾದ್ಯಕ್ಷ ಬಿ.ಎಸ್.ಹಿರೇಮಠ, ಅಧ್ಯಕ್ಷ ಪರಮೇಶ ಲಮಾಣಿ, ಎಂ.ವ್ಹಿ.ಗಾಡದ, ಬಸವರಾಜ ಹೊನ್ನಣ್ಣವರ, ಬಸವರಾಜ. ವ್ಹಿ.ಹೆಚ್, ಗೌಡಪ್ಪ ಬನ್ನೆ, ವಿಶ್ವನಾಥ ಬಂಡಿವಡ್ಡರ, ಮಂಜುನಾಥಕಮ್ಮಾರ, ಸದಾಶಿವಸ್ವಾಮಿ ಹಿರೇಮಠ, ಈಶ್ವರಕರಿಗೌಡ್ರ, ಸುಧಾಕರದೈವಜ್ಞ,ಸುರೇಶಯಲಿಗಾರ, ಪುಟ್ಟಪ್ಪಾ ಲಮಾಣಿ, ವಿರುಪಾಕ್ಷಣ್ಣ ನೀರಲಗಿ, ಸಿದ್ರಾಮಗೌಡ್ರ ಮೆಳ್ಳಾಗಟ್ಟಿ, ಶಿವಕುಮಾರಸ್ವಾಮಿ ಕೋಟಗಿಮಠ, ಚನ್ನವೀರ ನೀರಲಗಿ ಉಪಸ್ಥಿತರಿದ್ದರು.