ನೂತನ ಕೆಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸನ್ಮಾನ
ಶಿಗ್ಗಾವಿ 07: ಪ್ರತಿಯೊಂದು ಸಹಕಾರಿ ರಂಗಗಳ ಬೆಳವಣಿಗೆಗೆ ಎಲ್ಲರ ಸಹಕಾರ ಮನೋಭಾವನೆ ಬಹಳ ಮುಖ್ಯ ಎಂದು ಕೆಸಿಸಿ ಬ್ಯಾಂಕ್ ಧಾರವಾಡದ ನೂತನ ನಿರ್ದೇಶಕ ಸಂಗಮೇಶ ಕಂಬಾಳಿಮಠ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕ್ರೇಡಿಟ್ ಕೋ ಆಫ್ ಸೊಸೈಟಿಯಲ್ಲಿ ಸೊಸೈಟಿ ವತಿಯಿಂದ ಹಮ್ಮಿಕೊಂಡ ನೂತನ ಕೆಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಂತಹ ಸಹಕಾರ ಮತ್ತು ಹೊಂದಾಣಿಕೆಯಿಂದ ಪಟ್ಟಣದಲ್ಲಿ ಈ ಸೋಸೈಟಿ ಕಳೆದ ಐದು ವರ್ಷಗಳಿಂದ ಚನ್ನಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನ ನೋಡಿದ್ದೇನೆ ಇದು ಇದೇ ರೀತಿ ಮುಂದುವರೆಯಲಿ ನನ್ನ ಸಹಾಯ ಸಹಕಾರ ಸಂಪೂರ್ಣ ಈ ಸೋಸೈಟಿಗೆ ಇರುತ್ತದೆ ಎಂದರು.
ಎಪಿಎಂಸಿ ಮಾಜಿ ಅದ್ಯಕ್ಷ ತಿಪ್ಪಣ್ಣ ಸಾತಣ್ಣವರ ಮಾತನಾಡಿ, ಸೊಸೈಟಿಯು ಐದು ವುರ್ಷಗಳನ್ನ ಪೂರೈಸಿದೆ ಎಂಬುದನ್ನ ನಂಬಲಾಗುತ್ತಿಲ್ಲ, ಸಹಕಾರದಿಂದ ಬೆಳವಣಿಗೆಯಾಗಲಿ ಸಲಹೆ ಸೂಚನೆ ನಮ್ಮದು ಸದಾ ಇದಕ್ಕೆ ಇರುತ್ತದೆ ಎಂದರು.
ಸೋಸೈಟಿಯ ಅದ್ಯಕ್ಷ ಮಹಲಿಂಗಪ್ಪ ಹಡಪದ, ಉಪಾದ್ಯಕ್ಷ ವಿಶ್ವನಾಥ ಬಂಡಿವಡ್ಡರ, ನಿರ್ದೇಶಕರಾದ ಶಿವಕುಮಾರ ಮಡ್ಲಿಕರ, ಮುತ್ತುರಾಜ ಕ್ಷೌರದ, ಬಸವರಾಜ ಜಂಗಳಿ, ಮಲ್ಲಿಕಾರ್ಜುನ ಹಡಪದ, ಶಿವರಾಜ ಕ್ಷೌರದ, ಬಸವರಾಜ ಹಡಪದ, ಸಿದ್ದಪ್ಪ ಗಂಜೀಗಟ್ಟಿ, ಈರಣ್ಣ ಯಲಿಗಾರ, ರವಿ ಹಡಪದ, ವ್ಯವಸ್ಥಾಪಕ ಆನಂದಕುಮಾರ ಪಾಟೀಲ, ಸಿಬ್ಬಂದಿ ಪ್ರೇಮಾ ನಾವಿ, ಮಂಜುನಾಥ ಓಣಿಮನಿ, ಚೇತನ ಕೊರವರ ಸೇರಿದಂತೆ ಇತರರು ಇದ್ದರು.